ಸಪೋಟ ಜ್ಯೂಸ್ ಕುಡಿಯಿರಿ ಕೇಶಕಾಯ ಪಡೆಯಿರಿ

ಸಾಮಾನ್ಯವಾಗಿ ಜ್ಯೂಸ್ ಕುಡಿಯಲು ಫ್ರೂಟ್ಸ್ ಜ್ಯೂಸ್ ಸೆಂಟರ್‌ಗೆ ಹೋದರೆ ಹೆಚ್ಚಿನವರು ಮೊದಲು ಆರ್ಡರ್ ಮಾಡುವುದೇ ಈ ಸಪೋಟ ಅಥವಾ ಚಿಕ್ಕು ಹಣ್ಣಿನ ಜ್ಯೂಸ್! ಹೌದು ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಎಲ್ಲರಿಗೂ ಇಷ್ಟವಾಗುವ ಹಣ್ಣಿನ ಜ್ಯೂಸ್ ಅಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು.

photo credit social media

ಇನ್ನು ಬೇಸಿಗಾಲದಲ್ಲಿ ಈ ಚಿಕ್ಕು ಹಣ್ಣುಗಳು ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ ಇದನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಬಹಳ ಒಳ್ಳೆಯದು, ಅದರಲ್ಲಿಯೂ ಇದರ ಜ್ಯೂಸ್ ಮಾಡಿ ಸೇವಿಸಿದರೆ, ಅದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷಿಸಬಹುದು.

ಸಪೋಟ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳ ಜೊತೆಗೆ, ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಹಾಗೂ ಕಬ್ಬಿನಾಂಶವನ್ನು ಕೂಡ ಅಧಿಕ ಪ್ರಮಾಣದಲ್ಲಿ ಇರುವುದರಿಂದ ದೇಹದ ಮೂಳೆಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೀಗಾಗಿ ವಾರಕ್ಕೆ ಎರಡು ಮೂರು ಬಾರಿಯಾದರೂ ತಾಜಾ ಚಿಕ್ಕು ಹಣ್ಣಿನಿಂದ ಮಾಡಿದ ಚಿಕ್ಕು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.

ಫ್ರಾಕ್ಟೋಸ್ ಮತ್ತು ಸುಕ್ರೋಸ್‌ ಎಂಬ ನೈಸರ್ಗಿಕ ಸಕ್ಕರೆ ಅಂಶಗಳನ್ನು ಒಳಗೊಂಡಿರುವ ಈ ಹಣ್ಣಿನಲ್ಲಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಎಲ್ಲಾ ಗುಣಲಕ್ಷಣಗಳನ್ನು ನಿರೀಕ್ಷೆ ಮಾಡಬಹುದು.

ಅದರಲ್ಲೂ ವ್ಯಾಯಾಮದ ಬಳಿಕ ಈ ಹಣ್ಣಿನಿಂದ ಮಾಡಿದ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಗುವುದು.

ಅಷ್ಟೇ ಅಲ್ಲದೇ ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರ (ಮಿತವಾಗಿ ಸೇವನೆ ಮಾಡಬೇಕು) ಆರೋಗ್ಯಕ್ಕೂ ಇದರ ಜ್ಯೂಸ್ ಬಹಳ ಒಳ್ಳೆಯದು.

ಮುಖ್ಯವಾಗಿ ಈ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳ ಜೊತೆಗೆ ಖನಿಜಾಂಶಗಳು ಕೂಡ ಇರುವುದರಿಂದ ಆರೋಗ್ಯಕರ ಜೀವನ ಸಾಗಿಸಬಹುದು.

ಮೂತ್ರಪಿಂಡದ ಜಾಗೃತೆಯೇ ಆರೋಗ್ಯಕ್ಕೆ ಕಾರಣ

Follow Us on :-