ಅತಿಯಾಗಿ ತಿನ್ನುವುದರ ಅಡ್ಡಪರಿಣಾಮಗಳೇನು

ಕೆಲವರು ಹುಟ್ಟಿದ್ದೇ ತಿನ್ನಲು ಎನ್ನುವಂತೆ ಆಡುತ್ತಾರೆ. ಅತಿಯಾಗಿ ಆಹಾರ ಸೇವನೆ ಮಾಡುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಅತಿಯಾಗಿ ಆಹಾರ ಸೇವನೆ ಮಾಡಿದ ಬಳಿಕ ಜೀರ್ಣವಾಗದೇ ಚಡಪಡಿಸುತ್ತಾರೆ. ಅತಿಯಾಗಿ ಆಹಾರ ಸೇವಿಸುವುದರ ಅಡ್ಡಪರಿಣಾಮಗಳೇನು

Photo Credit: Social Media

ಜೀರ್ಣಕ್ರಿಯೆ ಸುಗಮಗೊಳಿಸುವ ಕಿಣ್ವಗಳು ಸೀಮಿತವಾಗಿ ಬಿಡುಗಡೆಯಾಗುತ್ತಿರುತ್ತವೆ

ಅತಿಯಾಗಿ ಆಹಾರ ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಸುಗಮವಾಗಿ ನಡೆಯಲು ತೊಂದರೆಯಾಗಬಹುದು

ಜೀರ್ಣಕ್ರಿಯೆ ನಿಧಾನವಾಗಿ ನಡೆಯುವುದರಿಂದ ಹೊಟ್ಟೆ ನೋವು ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳಬಹುದು

ಆಹಾರ ಹೆಚ್ಚು ಹೊತ್ತು ಜೀರ್ಣವಾಗದೇ ಉಳಿದರೆ ದೇಹದಲ್ಲಿ ಕೊಬ್ಬಿನಂಶ ಬೆಳವಣಿಗೆಗೆ ಕಾರಣವಾಗಬಹುದು

ಕೊಬ್ಬಿನಂಶ ಶೇಖರಣೆಯಾದಂತೆ ಸಹಜವಾಗಿಯೇ ದೇಹ ತೂಕ ಹೆಚ್ಚಿ ಬೊಜ್ಜು ಬೆಳೆಯಲು ಕಾರಣವಾಗಬಹುದು

ಅತಿಯಾಗಿ ಆಹಾರ ಸೇವನೆ ಮಾಡುವುದರಿಂದ ನಿದ್ರೆಯ ಹಾರ್ಮೋನ್ ಮೇಲೂ ಪರಿಣಾಮ ಬೀರಬಹುದು

ಹೀಗಾಗಿ ಅತಿಯಾದ ಆಹಾರ ಸೇವನೆ ಹಲವರಲ್ಲಿ ನಿದ್ರಾ ಹೀನತೆ ಸಮಸ್ಯೆಗೂ ಕಾರಣವಾಗಬಹುದು

ಎಲುಬಿನ ಆರೋಗ್ಯ ಸುಧಾರಿಸುವ 5 ಹಣ್ಣುಗಳು

Follow Us on :-