ಯಾವುದೂ ಹಿತಮಿತವಾಗಿದ್ದರೆ ಚೆನ್ನ. ಕಾಫಿಯೇ ಆದರೂ ಅಷ್ಟೇ. ಹಿತಮಿತವಾಗಿ ಸೇವನೆ ಮಾಡಿದರೆ ನಮ್ಮ ಕೆಲಸದಲ್ಲಿ ಚುರುಕು ತರುತ್ತದೆ. ಆದರೆ ಅತಿಯಾಗಿ ಕಾಫಿ ಸೇವನೆ ಮಾಡಿದರೆ ಅದರಿಂದ ಹಲವು ಆರೋಗ್ಯ ಸಮಸ್ಯೆಗಳಾಗಬಹುದು.
Photo Credit: Social Media
ಅತಿಯಾಗಿ ಕಾಫಿ ಸೇವನೆ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ಮಾನಸಿಕವಾಗಿ ಅಸ್ವಸ್ಥತೆ, ಒತ್ತಡ, ಆತಂಕ ಮುಂತಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಬಹುದು
ದಿನಕ್ಕೆ ಎರಡು ಕಪ್ ಗಿಂತ ಹೆಚ್ಚು ಕಾಫಿ ಸೇವನೆ ಮಾಡುವವರಿಗೆ ಹೃದಯ ಸಮಸ್ಯೆ ಬರಬಹುದು
ಕಾಫಿ ಅತಿಯಾಗಿ ಸೇವಿಸಿದರೆ ರಕ್ತನಾಳಗಳ ಮೇಲೆ ಪರಿಣಾಮ ಬೀರಿ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವಿಕೆಯಾಗಬಹುದು
ಕಾಫಿಯಲ್ಲಿ ಆಮ್ಲೀಯ ಗುಣವಿದ್ದು, ಅತಿಯಾಗಿ ಸೇವಿಸಿದರೆ ಎದೆಯುರಿ, ಹೊಟ್ಟೆ ಉರಿ ಸಮಸ್ಯೆಯಾಗಬಹುದು
ಕೆಫೈನ್ ಅಂಶ ಹೇರಳವಾಗಿರುವ ಕಾಫಿ ಹೆಚ್ಚು ಸೇವಿಸಿದರೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಳ್ಳಬಹುದು
ಕೆಫೈನ್ ಅಂಶವಿರುವ ಕಾರಣ ಕಾಫಿ ಅತಿಯಾಗಿ ಸೇವಿಸಿದರೆ ನಿದ್ರಾಹೀನತೆ ಸಮಸ್ಯೆ ಎದುರಿಸಬೇಕಾದೀತು