ನಾವು ಮಾಡುವ ಆಹಾರ ಪದಾರ್ಥಗಳಲ್ಲಿ ಘಮ ಹೆಚ್ಚಿಸಲು ಬಳಸುವ ಇಂಗು ಕೆಲವೊಂದು ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಗರ್ಭಿಣಿಯರು ಹೆಚ್ಚು ಇಂಗು ಸೇವಿಸಬಾರದು ಎನ್ನುತ್ತಾರೆ. ಇದರ ಅಡ್ಡಪರಿಣಾಮಗಳೇನು ನೋಡಿ.
Photo Credit: Social Media
ಇಂಗಿನಲ್ಲಿ ಆರೋಗ್ಯಕ್ಕೆ ಉಪಯುಕ್ತ ಅಂಶವಿರುವಷ್ಟೇ ಅಡ್ಡಪರಿಣಾಮಗಳೂ ಇವೆ
ಇಂಗು ಅತಿಯಾಗಿ ಸೇವಿಸುವುದರಿಂದ ಚರ್ಮದ ಅಲರ್ಜಿ ಸಮಸ್ಯೆ ಕಂಡುಬರವು ಸಾಧ್ಯತೆಗಳಿವೆ.
ಇಂಗು ಅತಿಯಾಗಿ ಸೇವನೆ ಮಾಡುವುದರಿಂದ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಹೆಚ್ಚು ಮಾಡಬಹುದು
ಇಂಗು ಜೀರ್ಣಕ್ರಿಯೆಗೆ ಉತ್ತಮವಾದರೂ ಅತಿಯಾಗಿ ಸೇವಿಸಿದರೆ ಬೇಧಿ, ಹೊಟ್ಟೆಯ ಸಮಸ್ಯೆ ತಂದೊಡ್ಡಬಹುದು
ಇಂಗನ್ನು ಹೇರಳವಾಗಿ ಬಳಕೆ ಮಾಡುವುದರಿಂದ ಕೆಲವರಿಗೆ ಗಂಟಲಿನಲ್ಲಿ ಅಲರ್ಜಿ ಕಂಡುಬರಬಹುದು
ಗರ್ಭಿಣಿಯರು ಅತಿಯಾಗಿ ಇಂಗು ಸೇವಿಸಿದರೆ ಗರ್ಭಪಾತಕ್ಕೂ ಕಾರಣವಾಗಬಹುದು ಎಂದು ತಜ್ಞರೇ ಹೇಳುತ್ತಾರೆ
ಗರ್ಭಿಣಿಯಾಗಿದ್ದಾಗ ಮತ್ತು ಬಾಣಂತಿಯಾಗಿದ್ದಾಗ ಇಂಗು ಸೇವನೆ ಆದಷ್ಟು ಕಡಿಮೆ ಮಾಡಿದರೆ ಉತ್ತಮ