ಪ್ರತಿನಿತ್ಯ ಬಿಯರ್ ಸೇವಿಸುವುದರ ದುಷ್ಪರಿಣಾಮಗಳು

ಎಲ್ಲವೂ ಹಿತಮಿತವಾಗಿದ್ದರೇ ಚೆನ್ನ. ಅದೇ ರೀತಿ ಬಿಯರ್ ಕೂಡಾ. ಅತಿಯಾಗಿ ಬಿಯರ್ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಾಗಬಹುದು. ಬಿಯರ್ ಸೇವನೆಯ ದುಷ್ಪರಿಣಾಮಗಳು ಯಾವುವು ಎಂದು ನೋಡೋಣ.

credit: social media

ಬಿಯರ್ ನಲ್ಲಿ ಕೊಬ್ಬಿನಂಶವೂ ಇದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ತೂಕ ಹೆಚ್ಚಳವಾಗಬಹುದು

ಬಿಯರ್ ನಲ್ಲಿ ಆಲ್ಕೋಹಾಲ್ ಅಂಶವಿದ್ದು ಅದು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು

ಬಿಯರ್ ನಲ್ಲಿರುವ ಆಲ್ಕೋಹಾಲ್ ಅಂಶ ಜ್ಞಾಪಕ ಶಕ್ತಿ ಕುಂಠಿತವಾಗುವುದು ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು

ಆಲ್ಕೋಹಾಲ್ ಅಂಶ ಸಣ್ಣ ಮತ್ತು ದೊಡ್ಡ ಕರುಳಿನ ಮೇಲೆ ಪರಿಣಾಮ ಬೀರಿ ಜೀರ್ಣಶಕ್ತಿ ಕುಂಠಿತಗೊಳಿಸಬಹುದು

ಕಿಡ್ನಿ ಕಾರ್ಯನಿರ್ವಹಣೆ ನಿಯಂತ್ರಿಸುವ ಹಾರ್ಮೋನ್ ಮೇಲೆ ಪರಿಣಾಮ ಬೀರಿ ನಿರ್ಜಲೀಕರಣಕ್ಕೊಳಗಾಗಬಹುದು

ಬಿಯರ್ ಪ್ರತಿನಿತ್ಯ ಸೇವಿಸುವುದರಿಂದ ಯಕೃತ್, ಅನ್ನನಾಳ, ಸ್ತನದ ಕ್ಯಾನ್ಸರ್ ಬರುವ ಅಪಾಯವೂ ಇದೆ

ನಿಯಮಿತವಾಗಿ ಬಿಯರ್ ಸೇವಿಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ಖಿನ್ನತೆಗೊಳಗಾಗಬಹುದು

ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ ಹೀಗೆ ಮಾಡಿ

Follow Us on :-