ಈ ಕಾಯಿಲೆ ಇರುವವರು ಸೌತೆಕಾಯಿ ಬಳಸಬೇಡಿ

ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ದೇಹಕ್ಕೆ ತಂಪು ಎಂದು ಅದನ್ನು ಹೇರಳವಾಗಿ ಸೇವಿಸುತ್ತೇವೆ. ಆದರೆ ಸೌತೆಕಾಯಿ ಕೆಲವೊಂದು ಆರೋಗ್ಯ ಸಮಸ್ಯೆಯಿರುವವರಿಗೆ ಒಳ್ಳೆಯದಲ್ಲ. ಯಾವ ರೋಗ ಇರುವವರು ಸೌತೆಕಾಯಿ ಸೇವಿಸಬಾರದು ನೋಡಿ.

credit: social media

ಸೌತೆಕಾಯಿ ಉರಿಶೀತ ಗುಣ ಹೊಂದಿದ್ದು ಬೇಧಿಯಾಗುತ್ತಿದ್ದರೆ ಇದನ್ನು ಸೇವಿಸಬೇಡಿ

ಸೌತೆಕಾಯಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕುಕರ್ಬಿಟೈನ್ ಎಂಬ ವಿಷಕಾರೀ ಅಂಶವಿದೆ

ಸೌತೆಕಾಯಿ ಅತಿಯಾಗಿ ಸೇವಿಸುವುದರಿಂದ ಬಹುಮೂತ್ರವಾಗಿ ದೇಹ ನಿರ್ಜಲೀಕರಣಕ್ಕೊಳಗಾಗಬಹುದು

ಸೌತೆಕಾಯಿಯನ್ನು ಅತಿಯಾಗಿ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಗೂ ಕಾರಣವಾಗಬಹುದು

ಮೈಗ್ರೇನ್ ಇರುವವರು ಇದನ್ನು ಸೇವಿಸಿದರೆ ಮೂಗಿನ ದಾರಿಯ ಉರಿಯೂತವಾಗಬಹುದು

ಶೀತ, ಕಫ ಪ್ರಕೃತಿಯವರು ಇದನ್ನು ಸೇವಿಸಿದರೆ ರೋಗ ಬಾಧೆ ಹೆಚ್ಚಾಗುವ ಸಾಧ್ಯಾತೆಯಿದೆ.

ಅತಿಯಾಗಿ ಸೌತೆಕಾಯಿ ಸೇವಿಸುವುದರಿಂದ ಚರ್ಮದ ಅಲರ್ಜಿ ಉಂಟಾಗಬಹುದು.

ಉಪ್ಪು ಕಡಿಮೆ ಸೇವಿಸುವುದರ ಲಾಭಗಳು

Follow Us on :-