ಕುಚ್ಚಿಲಕ್ಕಿ ಅನ್ನ ಮಾಡುವಾಗ ಈ ತಪ್ಪು ಮಾಡಬೇಡಿ

ಕುಚ್ಚಿಲಕ್ಕಿ ಅನ್ನದ ಗಂಜಿ ಆರೋಗ್ಯಕ್ಕೆ ಅತ್ಯುತ್ತಮ. ಆದರೆ ಕುಚ್ಚಿಲಕ್ಕಿ ಅನ್ನ ಮಾಡುವಾಗ ಕೆಲವೊಂದು ತಪ್ಪು ಮಾಡಿದರೆ ಗಂಜಿ ಚೆನ್ನಾಗಿ ಬರಲ್ಲ. ಇದನ್ನು ಮಾಡಲು ಟಿಪ್ಸ್ ಇಲ್ಲಿದೆ.

Photo Credit: Instagram

ಕುಕ್ಕರ್ ಇರಲಿ, ಪಾತ್ರೆಯೇ ಆಗಿರಲಿ ನೀರು ಸರಿಯಾಗಿ ಕುದಿದ ಮೇಲೆಯೇ ಅಕ್ಕಿ ಹಾಕಿ

ಇದರಿಂದ ಅನ್ನ ಉದುರು ಉದುರಾಗಿ ಬರುತ್ತದೆ

ಕುಚ್ಚಿಲಕ್ಕಿ ಅನ್ನಕ್ಕಿಡುವ ಮೊದಲು ಚೆನ್ನಾಗಿ ತೊಳೆದು ಧೂಳಿನಂಶ ತೆಗೆಯಬೇಕು

ಕುಕ್ಕರ್ ನಲ್ಲಿ ಬೇಯಿಸುವಾಗ 4 ಪಟ್ಟು ನೀರು ಹಾಕಬೇಕು

ನೀರು ಸಾಕಷ್ಟಿಲ್ಲದೇ ಇದ್ದರೆ ಅನ್ನ ಉದುರು ಉದುರಾಗದು

ಪಾತ್ರೆಯಲ್ಲಿ ಅನ್ನ ಬೇಯಿಸುವಾಗ ಆಗಾಗ ಸೌಟು ಆಡಿಸುತ್ತಿರಿ

ಅನ್ನ ಬೆಂದ ಮೇಲೆ ಗಂಜಿ ಬೇಡವೆಂದಿದ್ದರೆ ತಕ್ಷಣವೇ ಗಂಜಿ ಬಸಿದುಕೊಳ್ಳಿ

ಮಕ್ಕಳಿಗೆ ಇಷ್ಟವಾಗುತ್ತದೆ ಈ ದೋಸಾ ಪಿಜ್ಜಾ

Follow Us on :-