ಮಸಾಲ ದೋಸೆ ಹೋಟೆಲ್ ನಲ್ಲಿ ಸವಿಯುವಾಗ ಅದರ ಒಳಗೆ ಘಮ ಕೊಡುವ ಕೆಂಪು ಚಟ್ನಿ ನಮ್ಮ ಬಾಯಲ್ಲಿ ನೀರೂರಿಸುತ್ತದೆ. ಹಾಗಿದ್ದರೆ ಮಸಾಲ ದೋಸೆಗೆ ಹಾಕುವ ಕೆಂಪು ಚಟ್ನಿ ಮಾಡುವುದು ಹೇಗೆ ಎಂದು ಇಲ್ಲಿ ನೋಡೋಣ.
Photo Credit: Instagram
ಧನಿಯಾ, ಜೀರಿಗೆ, ಕೆಂಪು ಮೆಣಸು, ಬೆಳ್ಳುಳ್ಳಿ, ಕರಿಬೇವು, ಇಂಗು, ಉಪ್ಪು ಬೇಕಾಗುವ ಸಾಮಗ್ರಿಗಳು
ಮೊದಲಿಗೆ ನಾಲ್ಕೈದು ಕೆಂಪು ಮೆಣಸುಗಳನ್ನು ನೀರಿನಲ್ಲಿ ಹಾಕಿ ನೆನೆಯಲು ಬಿಡಿ
ಈಗ ನೆನಸಿಟ್ಟ ಮೆಣಸು ಮತ್ತು ನಾಲ್ಕೈದು ಬೆಳ್ಳುಳ್ಳಿ ಎಸಳುಗಳು ಮತ್ತು ಇಂಗಿ ಮಿಕ್ಸಿ ಜಾರಿಗೆ ಹಾಕಿ
ಇದಕ್ಕೆ ಸ್ವಲ್ಪ ಕೊತ್ತಂಬರಿ ಅಥವಾ ಧನಿಯಾ ಕಾಳುಗಳು, ಜೀರಿಗೆ ಹಾಕಿ
ಇದಕ್ಕೆ ಸ್ವಲ್ಪ ಐದಾರು ಎಸಳು ಕರಿಬೇವು, ರುಚಿಗೆ ತಕ್ಕ ಉಪ್ಪು ಸೇರಿಸಿ
ಇವಿಷ್ಟನ್ನೂ ಹಾಕಿದ ಬಳಿಕ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
ಈಗ ಚಟ್ನಿ ರೆಡಿಯಾಗಿದ್ದು ಬಿಸಿ ಬಿಸಿ ಮಸಾಲೆ ದೋಸೆ ಮೇಲೆ ಹಚ್ಚಿಕೊಂಡು ಸವಿಯಿರಿ