ಹೋಟೆಲ್ ಶೈಲಿಯ ರಾಯತ ಮಾಡುವ ವಿಧಾನ

ರೆಸ್ಟೋರೆಂಟ್ ಗಳಿಗೆ ಹೋದರೆ ಪಲಾವ್ ಅಥವಾ ರೈಸ್ ಬಾತ್ ಜೊತೆ ನೀಡುವ ರಾಯತದ ರುಚಿಯೇ ಬೇರೆ. ಮನೆಯಲ್ಲಿಯೂ ಹೋಟೆಲ್ ಶೈಲಿಯಲ್ಲಿ ರಾಯತ ಮಾಡಬಹುದು. ಅದನ್ನು ಮಾಡುವುದು ಹೇಗೆ ಇಲ್ಲಿ ನೋಡಿ.

Photo Credit: Instagram

ಹುಳಿಯಿರದ ಒಂದು ಕಪ್ ನಷ್ಟು ಮೊಸರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಹಾಕಿ

ಇದಕ್ಕೆ ಸ್ವಲ್ಪ ಕಾಳು ಮೆಣಸು ಮತ್ತು ಜೀರಿಗೆ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

ಈಗ ಇದಕ್ಕೆ ಚಿಕ್ಕದಾಗಿ ಹಚ್ಚಿಕೊಂಡ ಸೌತೆಕಾಯಿ ಮತ್ತು ಉದ್ದಕ್ಕೆ ಹಚ್ಚಿಕೊಂಡ ಈರುಳ್ಳಿ ಸೇರಿಸಿ

ಈಗ ಇದಕ್ಕೆ ಟೊಮೆಟೊ ಮತ್ತು ಕ್ಯಾಪ್ಸಿಕಂ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹಚ್ಚಿಕೊಂಡು ಸೇರಿಸಿ

ಬೇಕಿದ್ದರೆ ಇದಕ್ಕೆ ಕ್ಯಾರೆಟ್ ನ್ನೂ ತೆಳುವಾಗಿ ಮತ್ತು ಉದ್ದಕೆ ಕಟ್ ಮಾಡಿ ಹಾಕಿಕೊಳ್ಳಬಹುದು

ಈಗ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ

ಬಳಿಕ ಖಾರಕ್ಕೆ ಸ್ವಲ್ಪ ಖಾರದ ಪುಡಿ ಮತ್ತು ಘಮಕ್ಕೆ ಗರಂ ಮಸಾಲೆ ಸೇರಿಸಿದರೆ ರಾಯತ ರೆಡಿ

ತೂಕ ಇಳಿಸಲು ಆಯುರ್ವೇದಿಕ ಪರಿಹಾರ

Follow Us on :-