ರಾಮ ಲಲ್ಲಾನ ವಿಗ್ರಹದ ಆಭರಣದ ಮೌಲ್ಯ, ವಿಶೇಷತೆ

ಜನವರಿ 22 ರಂದು ಲೋಕಾರ್ಪಣೆಯಾದ ಅಯೋಧ್ಯೆ ರಾಮ ಮಂದಿರದ ರಾಮ ಲಲ್ಲಾನ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಪ್ರತಿಷ್ಠಾಪನೆ ಸಂದರ್ಭದಲ್ಲಿ ಸರ್ವ ಆಭರಣಗಳಿಂದ ಬಾಲ ರಾಮನನ್ನು ಸಿಂಗರಿಸಲಾಗಿತ್ತು. ರಾಮನ ವಿಗ್ರಹಕ್ಕೆ ಹಾಕಲಾದ ಆಭರಣದ ಮೌಲ್ಯ ಮತ್ತು ವಿಶೇಷತೆ ಬಗ್ಗೆ ನೋಡೋಣ.

credit: social media

ಜನವರಿ 22 ರಂದು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹ

ಕಿರೀಟವನ್ನು ವಜ್ರ, ಎಮರಾಲ್ಡ್, ಚಿನ್ನ ಬಳಸಿ ಮಾಡಲಾಗಿದೆ. ಇದರ ಮಧ್ಯಭಾಗದಲ್ಲಿ ಸೂರ್ಯ ದೇವನ ಚಿಹ್ನೆಯಿದೆ.

ಎದೆಗೆ ಕೌಸ್ತುಭ ಮಣಿಯ ಆಭರಣ ಹಾಕಲಾಗಿದ್ದು, ಇದು ಮಹಾವಿಷ್ಣು ಧರಿಸುವ ಆಭರಣವಾಗಿದೆ.

ವಿಜಯದ ಸಂಕೇತವಾಗಿ ಕೊರಳಿಗೆ ಸುದರ್ಶನ ಚಕ್ರ, ಕಮಲ, ಶಂಕ, ಚಕ್ರ ಮತ್ತು ಮಂಗಳ ಕಲಶವಿರುವ ಅತೀ ಉದ್ದದ ನೆಕ್ಲೇಸ್ ತೊಡಿಸಲಾಗಿದೆ.

ರಜತ ಬಣ್ಣದಲ್ಲಿರುವ ವಜ್ರ ಖಚಿತ ತಿಲಕವಿಡಲಾಗಿದೆ.

ಮಾಣಿಕ್ಯ, ವಜ್ರ, ಚಿನ್ನದಿಂದ ಮಾಡಲಾದ ಸೊಂಟದ ಡಾಬು

ವಜ್ರ, ಮಾಣಿಕ್ಯ, ಪಚ್ಚೆಗಳಿಂದ ಮಾಡಿದ ಕೈ ಕಡಗ ತೊಡಿಸಲಾಗಿದೆ.

ಬಾಲರಾಮನ ಬೆರಳಿಗೆ ವಜ್ರ ಖಚಿತ ಉಂಗುರಗಳನ್ನು ತೊಡಿಸಲಾಗಿದೆ.

ಎಳೆನೀರಿನಿಂದ ತಲೆಸ್ನಾನ ಮಾಡುವುದರ ಪ್ರಯೋಜನಗಳು

Follow Us on :-