ತಕ್ಷಣ ಅಸಿಡಿಟಿ ಸಮಸ್ಯೆ ನಿವಾರಣೆಗೆ, ಇಲ್ಲಿದೆ ಸಿಂಪಲ್ ಮನೆಮದ್ದುಗಳು
ಮಳೆಗಾಲದಲ್ಲಿ ಜೀರ್ಣಕ್ರಿಯೆ ಶಕ್ತಿಯು ಕುಂದುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹೀಗಾಗಿ ಮಳೆಗಾಲದಲ್ಲಿ ಅಜೀರ್ಣ ಸಮಸ್ಯೆಯು ಹೆಚ್ಚು. ಕೇವಲ ಮಳೆಗಾಲ ಮಾತ್ರವಲ್ಲದೆ, ಕೆಲವರಿಗೆ ವರ್ಷವಿಡೀ ಅಜೀರ್ಣ ಸಮಸ್ಯೆಯು ಕಾಡುವುದು. ಇದರಿಂದಾಗಿ ಅಸಿಡಿಟಿ ಅಥವಾ ಆಮ್ಲೀಯ ಪ್ರತಿರೋಧದ ಸಮಸ್ಯೆಯು ಕಾಡುವುದು. ಇದಕ್ಕಾಗಿ ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಸೇವನೆ ಮಾಡಿದ ಕೂಡಲೇ ತಾತ್ಕಾಲಿಕ ಶಮನ ಸಿಗುವುದು. ಆದರೆ ಕೆಲವೇ ಗಂಟೆಗಳ ಬಳಿಕ ಮತ್ತೆ ಆಸಿಡಿಟಿಯ ಕೈ ಮೇಲಾಗುವುದು.
photo credit social media
ಮನೆಯಲ್ಲೇ ಕೆಲವೊಂದು ಮನೆಮದ್ದುಗಳನ್ನು ಪ್ರಯೋಗ ಮಾಡಿದರೆ ಅದರಿಂದ ಅಸಿಡಿಟಿ ದೂರ ಮಾಡಬಹುದು. ಅಸಿಡಿಟಿ, ಆಮ್ಲೀಯ ಪ್ರತಿರೋಧ ಮತ್ತು ಎದೆಯುರಿ ಸಮಸ್ಯೆಯನ್ನು ನಿವಾರಿಸಬಹುದು. ಅಸಿಡಿಟಿ ದೂರವಿಡಲು ನಾವಿಲ್ಲಿ ನಿಮಗೆ ನಾಲ್ಕು ಮನೆಮದ್ದುಗಳನ್ನು ತಿಳಿಸಿಕೊಡಲಿದ್ದೇವೆ. ಇದನ್ನು ಬಳಸಿಕೊಂಡು ಅಸಿಡಿಟಿ ಸಮಸ್ಯೆ ದೂರವಿಡಿ.
ಅಸಿಡಿಟಿ ಕಾಡಿದರೆ ಆಗ ಯಾವುದೇ ಆಹಾರ ಸೇವಿಸಲು ಸಾಧ್ಯವಾಗದು ಮತ್ತು ದೈನಂದಿನ ಚಟುವಟಿಕೆ ಮೇಲೂ ಇದು ಪರಿಣಾಮ ಬೀರುವುದು. ಇದಕ್ಕಾಗಿ ತಂಪಾದ ಹಾಲು ಕುಡಿದರೆ ಶಮನ ಸಿಗುವುದು. ಅದು ಹೇಗೆ ಎಂದು ನೀವು ಪ್ರಶ್ನಿಸಬಹುದು.
ಹಾಲಿನಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶವು ಅತಿಯಾದ ಆಮ್ಲವನ್ನು ಹೀರಿಕೊಳ್ಳುವುದು. ಹಾಲು ತಂಪಾಗಿದ್ದರೆ ಅದರಿಂದ ಎದೆಯುರಿಗೆ ತಕ್ಷಣವೇ ಪರಿಹಾರ ಸಿಗುವುದು. ಸಕ್ಕರೆ ಹಾಕದೆ ಕುಡಿಯಿರಿ.
ಊಟವಾದ ಬಳಿಕ ಪ್ರತಿಯೊಂದು ಹೋಟೆಲ್ ಗಳಲ್ಲಿ ಬಿಲ್ ಜತೆಗೆ ತಂದಿಡುವಂತಹ ಸೋಂಪು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ನಾವು ತಿನ್ನುವಂತಹ ಮೌಥ್ ಪ್ರೆಶ್ನರ್ ಗಳಲ್ಲಿ ಕೂಡ ಇದನ್ನು ಬಳಕೆ ಮಾಡಲಾಗುತ್ತದೆ.
ಊಟದ ಬಳಿಕ ಸೋಂಪು ಜಗಿದರೆ ಆಗ ಜಠರಕರುಳಿನ ಸಮಸ್ಯೆಯು ನಿವಾರಣೆ ಆಗುವುದು. ಕೆಲವು ದಿನಕ್ಕೊಮ್ಮೆ ನೀವು ಸೋಂಪು ಟೀ ಕುಡಿದರೆ ಅದು ತುಂಬಾ ಲಾಭಕಾರಿ. ಇದು ಜೀರ್ಣಕ್ರಿಯೆಯ ಆರೋಗ್ಯ ಸುಧಾರಣೆ ಮಾಡಿ, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು.
ದೇಹವನ್ನು ತಂಪಾಗಿಡಲು ಒಂದು ಲೋಟ ತಂಪಾದ ಮಜ್ಜಿಗೆ ಕುಡಿಯಬೇಕು. ಇದು ದೇಹವನ್ನು ತಂಪಾಗಿಡುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಗೂ ಸಹಕಾರಿ. ಆಯುರ್ವೇದದ ಪ್ರಕಾರ ಮಜ್ಜಿಗೆಯನ್ನು ಸಾತ್ವಿಕ ಆಹಾರವೆಂದು ಪರಿಗಣಿಸಲಾಗಿದೆ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಮತ್ತು ಶಮನಕಾರಿ ಗುಣಗಳು ಇವೆ.
ಜೀರ್ಣಕ್ರಿಯೆಯನ್ನು ಸರಿಪಡಿಸುವಲ್ಲಿ ತುಳಸಿಯನ್ನು ಔಷಧಿ ಎಂದೇ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರ ಅಲ್ಲ, ಆಯುರ್ವೇದದಲ್ಲಿ ತುಳಸಿ ರಸ ಔಷಧವೆಂದೇ ಪರಿಗಣಿಸಲಾಗಿದೆ. ತುಳಸಿ ಎಲೆಯನ್ನು ಹಾಗೆಯೇ ತಿನ್ನಬಹುದು, ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು.