ತಲೆಹೊಟ್ಟು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎದುರಿಸುತ್ತಿರುವ ಸಾಮಾನ್ಯ ಕೂದಲಿನ ಸಮಸ್ಯೆಯಾಗಿದೆ. ತಲೆಹೊಟ್ಟಿನಿಂದಾಗಿ ಕೂದಲು ಉರುರುವ ಸಮಸ್ಯೆ, ನೆತ್ತಿಯ ಸೋಂಕಿನ ಸಮಸ್ಯೆ ಕೂಡಾ ಕಾಡುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ ಯನ್ನು ಹೊಂದಿದ್ದು, ತಲೆಹೊಟ್ಟಿನ ಸಮಸ್ಯೆಗೆ ಆಮ್ಲಾ ಪೌಡರ್ ಅನ್ನು ಬಳಸುವುದರಿಂದ ನಿಮ್ಮ ನೆತ್ತಿಯಿಂದ ಹೆಚ್ಚುವರಿ ಎಣ್ಣೆ ಮತ್ತು ಸೂಕ್ಷ್ಮಜೀವಿಗಳನ್ನು ತೊಡೆದುಹಾಕುತ್ತದೆ, ತುರಿಕೆ ಸಂವೇದನೆಯನ್ನು ಶಾಂತಗೊಳಿಸುತ್ತದೆ.
photo credit social media
ಬೇವು ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದರ ಆಂಟಿಮೈಕ್ರೊಬಿಯಲ್ ಗುಣಗಳು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮೊಟ್ಟೆಯ ಬಿಳಿಭಾಗವು ನೆತ್ತಿಗೆ ಪ್ರೋಟೀನ್ ಕೊರತೆಯನ್ನು ನೀಗಿಸುತ್ತದೆ ಮತ್ತು ತಲೆಹೊಟ್ಟು ನಿವಾರಿಸಲು ಸಹಾಯ ಮಾಡುತ್ತದೆ. ಇದು ಎಣ್ಣೆಯುಕ್ತ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ, ಕೂದಲನ್ನು ಬಲಪಡಿಸುತ್ತದೆ, ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.
ಮೆಂತ್ಯ ಬೀಜಗಳು ಹೆಚ್ಚಿನ ಪ್ರೊಟೀನ್ ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ತಡೆಯಲು ಸಹಾಯ ಮಾಡುತ್ತದೆ.
ನಿಯಮಿತವಾಗಿ ಮೆಹಂದಿಯನ್ನು ಕೂದಲಿಗೆ ಬಳಸೋದರಿಂದ ತಲೆಹೊಟ್ಟು ನಿವಾರಿಸಬಹುದು. ಮೆಹಂದಿ ನಿಮ್ಮ ಕೂದಲಿನ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ.
ತೆಂಗಿನ ಎಣ್ಣೆಯು ನಿಮ್ಮ ಕೂದಲನ್ನು ಪೋಷಿಸುತ್ತದೆ ಇದರ ಜೊತೆ ಸ್ವಲ್ಪ ನಿಂಬೆ ರಸ ಬೆರೆಸಿದರೆ, ಅದು ತಲೆಹೊಟ್ಟನ್ನು ಗುಣಪಡಿಸುತ್ತದೆ.
ಮೊಸರಿನ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ನಿಮ್ಮ ಕೂದಲಿಗೆ ಸೌಮ್ಯವಾದ ಕ್ಲೆನ್ಸಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇದು ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
ತಲೆಹೊಟ್ಟಿನ ಸಮಸ್ಯೆಗೆ ಆಮ್ಲಾ ಪೌಡರ್ ಅನ್ನು ಬಳಸುವುದರಿಂದ ನಿಮ್ಮ ನೆತ್ತಿಯಿಂದ ಹೆಚ್ಚುವರಿ ಎಣ್ಣೆ ಮತ್ತು ಸೂಕ್ಷ್ಮಜೀವಿಗಳನ್ನು ತೊಡೆದುಹಾಕುತ್ತದೆ, ತುರಿಕೆ ಸಂವೇದನೆಯನ್ನು ಶಾಂತಗೊಳಿಸುತ್ತದೆ.