ಹಾಗಲಕಾಯಿ ದೇಹದ ತೂಕ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ

ಹಾಗಲಕಾಯಿ ಕಹಿಗೆ ಹೆಸರುವಾಸಿಯಾಗಿದೆ. ಅದರ ಸೇವನೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರಾಚೀನ ಕಾಲದಿಂದಲೂ ಔಷಧಿಗಳಲ್ಲಿ ಮತ್ತು ಆಹಾರ ತರಕಾರಿಗಳಲ್ಲಿ ಇದನ್ನು ಬಳಸುತ್ತಾರೆ. ನಿಮ್ಮಲ್ಲಿ ಹಲವರಿಗೆ ಹಾಗಲಕಾಯಿಯೆಂದರೆ ಸ್ವಲ್ಪ ತಿರಸ್ಕಾರವೇ ಇರಬಹುದು. ಆದರೆ ಇದು ಕಹಿಯಾದಷ್ಟೇ ಉತ್ತಮ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ತಲೆನೋವು, ಗಂಟುಗಳಲ್ಲಿ ನೋವು ಮತ್ತು ಮದುಮೇಹದಂತಹ ಗಂಭೀರ ಕಾಯಿಲೆಗಳನ್ನೇ ದೂರಮಾಡುವ ಶಕ್ತಿಯನ್ನು ಹೊಂದಿದೆ.

photo credit social media

ಮಧುಮೇಹ ನಿಯಂತ್ರಣ: ಹಾಗಲಕಾಯಿಯು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾದ ಆಹಾರಗಳಲ್ಲಿ ಒಂದಾಗಿದೆ. ಹಾಗಲಕಾಯಿಯ ಸೊಪ್ಪು, ಕಾಯಿ ಹೀಗೆ ಯಾವುದೇ ಭಾಗವನ್ನು ಔಷಧದ ರೂಪದಲ್ಲಿ ತೆಗೆದುಕೊಂಡರೂ ಉತ್ತಮ ಪರಿಣಾಮವನ್ನು ನೀಡುತ್ತದೆ.

ಮಧುಮೇಹ ಇರುವವರಲ್ಲಿ ಕರುಳಿನಿಂದ ಗ್ಲುಕೋಸ್ ಹಿರಿಕೆಯಾಗುವ ಅಂಶವನ್ನು ಕಡಿಮೆಗೊಳಿಸುವ ಜೊತೆಗೆ ಸ್ನಾಯುಗಳಲ್ಲಿ ಅವುಗಳ ಬಳಕೆಯನ್ನು ಹೆಚ್ಚಿನದಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಧುಮೇಹಿಗಳು ತಮ್ಮ ಸಮಸ್ಯೆಯಿಂದ ದೂರಾಗಿ ನಿರಾಳತೆಯನ್ನು ಪಡೆಯುತ್ತಾರೆ. ಈ ಎಲ್ಲ ಬದಲಾವಣೆಗಳಿಗೆ ಅದರಲ್ಲಿರುವ ಪೈಟೋಕೆಮಿಕಲ್ಸ್ ಕಾರಣವಾಗಿದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು: ಹಾಗಲಕಾಯಿ ರಸವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ನಂತಹ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗಲಕಾಯಿ ದೇಹದ ರಕ್ತದ ಒತ್ತಡವನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತಲೆನೋವು ಗುಣಪಡಿಸಲು: ಹಾಗಲಕಾಯಿ ಸೇವನೆ ತಲೆನೋವನ್ನು ಗುಣಪಡಿಸುತ್ತದೆ. ನಿಮಗೆ ತಲೆನೋವಿನ ಸಮಸ್ಯೆ ಇದ್ದರೆ ಹಾಗಲಕಾಯಿ ರಸವನ್ನು ಹಣೆಗೆ ಹಚ್ಚಿ, ಹೀಗೆ ಮಾಡುವುದರಿಂದ ತಲೆನೋವು ಗುಣವಾಗುತ್ತದೆ.

ಮೊಡವೆಗಳ ನಿವಾರಣೆ: ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ.

ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.

ರೋಗನಿರೋಧಕ ಶಕ್ತಿ ಹೆಚ್ಚಳ: ರೋಗನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು ಹಾಗೂ ಹಲವಾರು ಕಾಯಿಲೆಗಳಿಂದ ರಕ್ಷಣೆ ನೀಡುವುದು.

ಕ್ಯಾನ್ಸರ್ ಸಂಬಂಧಿತ ಜೀವಾಣುಗಳ ನಿರ್ಮೂಲನೆಗೆ ಗೆಡ್ಡೆ ಗೆಣಸು ಸೇವಿಸಿ

Follow Us on :-