ಕ್ಯಾನ್ಸರ್ ಸಂಬಂಧಿತ ಜೀವಾಣುಗಳ ನಿರ್ಮೂಲನೆಗೆ ಗೆಡ್ಡೆ ಗೆಣಸು ಸೇವಿಸಿ

ಸಿಹಿ ಗೆಣಸು ಒಂದು ಜಾತಿಯ ಗೆಡ್ದೆ. ಇದು ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಪಿಷ್ಠವನ್ನು ಹೊಂದಿರುತ್ತದೆ. ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳಿವೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ.

photo credit social media

ಸಿಹಿ ಗೆಣಸು ಪುಷ್ಟಿದಾಯಕ ಆಹಾರ. ಗೆಣಸನ್ನು ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು, ಇಲ್ಲವೇ ಕೆಂಡದ ಮೇಲೆ ಸುಟ್ಟು ತಿಂದರೂ ಬಲು ರುಚಿಕರ.

ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ .

ಸಿಹಿ ಗೆಣಸಿನಲ್ಲಿರುವ ಪೊಟ್ಯಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ.

ಚರ್ಮದ ಯೌವನದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಇದರಲ್ಲಿರುವ ಬಿಟಾ-ಕೆರೊಟಿನ್ ಅಂಶ ಮಧುಮೇಹವನ್ನು ನಿಯಂತ್ರಿಸುತ್ತದೆ.

ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.

ಹಾಗಾಗಿ ಸಿಹಿ ಗೆಣಸು, ಸಿಹಿ ಎಂದು ತಿನ್ನದೇ ಇರಬೇಡಿ. ಇದನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನೂ ಉತ್ತಮವಾಗಿಸಿಕೊಳ್ಳಿ.

ಡೊಣ್ಣೆ ಮೆಣಸಿನಕಾಯಿ ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ

Follow Us on :-