ಬ್ಯಾಚುಲರ್ಸ್ ಗೆ ಸುಲಭವಾಗಿ ಮಾಡಬಹುದಾದ ಮತ್ತು ರುಚಿಕರವಾದ ಗೊಜ್ಜು ತುಂಬಾ ಇಷ್ಟವಾಗುತ್ತದೆ. ಅಂತಹದ್ದೇ ಒಂದು ಗೊಜ್ಜಿನ ರೆಸಿಪಿ ನೋಡೋಣ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವುದು ಹೇಗೆ ಇಲ್ಲಿ ನೋಡಿ.
Photo Credit: Instagram, WD
ಆಲೂಗಡ್ಡೆ, ಈರುಳ್ಳಿ, ಮೊಸರು ಒಗ್ಗರಣೆಗೆ ಇಂಗು, ಸಾಸಿವೆ, ಕರಿಬೇವು, ಮೆಣಸು, ಎಣ್ಣೆ ಬೇಕಾಗುತ್ತದೆ
ಮೊದಲು ಆಲೂಗಡ್ಡೆಯನ್ನು ಕತ್ತರಿಸದೇ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ
ಆಲೂಗಡ್ಡೆ ಬಿಸಿ ಆರಿದ ಬಳಿಕ ಅದರ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ ಪುಡಿ ಮಾಡಿಟ್ಟುಕೊಳ್ಳಿ.
ಈಗ ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ
ಈಗ ಕಿವುಚಿದ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟು ಸೇರಿಸಿ ಅದಕ್ಕೆ ಸ್ವಲ್ಪ ಮೊಸರು ಹಾಕಿ
ಇದನ್ನು ಚೆನ್ನಾಗಿ ಕಲಸಿಕೊಂಡು ಉಪ್ಪು ಹಾಕಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿಕೊಂಡು ಗೊಜ್ಜಿನ ಹದಕ್ಕೆ ತನ್ನಿ
ಇದಕ್ಕೆ ಇಂಗು, ಸಾಸಿವೆ, ಕೆಂಪು ಮೆಣಸು, ಕರಿಬೇವು ಹಾಕಿದ ಒಗ್ಗರಣೆ ಹಾಕಿಕೊಂಡರೆ ಸುಲಭದ ಗೊಜ್ಜು ರೆಡಿ