ಮಕ್ಕಳು ಬಿದ್ದು ಗಾಯ ಮಾಡಿಕೊಂಡರೆ ಮನೆಮದ್ದು

ಮಕ್ಕಳು ಆಡುವಾಗ ಬಿದ್ದು ಗಾಯ ಮಾಡಿಕೊಳ್ಳುವುದು ಸಹಜ. ಗಾಯ ಚಿಕ್ಕದಾದರೂ ಮಕ್ಕಳು ಇದರಿಂದ ಬಹಳ ಕಿರಿ ಕಿರಿ ಅನುಭವಿಸುತ್ತಾರೆ. ಹೀಗಿರುವಾಗ ಅದಕ್ಕೆ ವೈದ್ಯರ ಸಹಾಯವಿಲ್ಲದೇ ಪರಿಣಾಮಕಾರಿಯಾಗಿ ಮಾಡಬಹುದಾದ ಮನೆ ಮದ್ದುಗಳು ಇಲ್ಲಿದೆ.

credit: social media

ಮಕ್ಕಳು ಬಿದ್ದು ಗಾಯ ಮಾಡಿಕೊಂಡು ಉರಿ ನೋವಾಗುತ್ತಿದ್ದರೆ ಆ ಜಾಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಬಹುದು

ಮಕ್ಕಳು ತರಚು ಗಾಯ ಮಾಡಿಕೊಂಡು ನೋವಾಗುತ್ತಿದ್ದರೆ ಈರುಳ್ಳಿ ಎಣ್ಣೆ ಮಾಡಿ ಆ ಜಾಗಕ್ಕೆ ಹಚ್ಚಬಹುದು

ಮೆಂತ್ಯದ ಕಾಳನ್ನು ಕುದಿಸಿ ನೀರನ್ನು ತಣ್ಣಗಾಗಿಸಿದ ಮೇಲೆ ಆ ಜಾಗಕ್ಕೆ ಹತ್ತಿಯಿಂದ ಮೃದುವಾಗಿ ಹಚ್ಚಿಕೊಳ್ಳಿ

ಆಪಲ್ ಸೈಡ್ ವಿನೇಗರ್ ಮತ್ತು ನೀರಿನ ಅಂಶವನ್ನು ಗಾಯವಾದ ಜಾಗಕ್ಕೆ ಹಚ್ಚುತ್ತಿದ್ದರೆ ಬೇಗನೇ ವಾಸಿಯಾಗುತ್ತದೆ

ಕೊತ್ತಂಬರಿ ಸೊಪ್ಪನ್ನು ಜಜ್ಜಿ ರಸ ತೆಗೆದು ಗಾಯವಾದ ಜಾಗಕ್ಕೆ ಹಚ್ಚುವುದರಿಂದ ತರಚು ಗಾಯ ವಾಸಿಯಾಗುತ್ತದೆ

ಪಪ್ಪಾಯಿ ಹಣ್ಣಿನ ಹೋಳನ್ನು ಗಾಯವಾದ ಜಾಗಕ್ಕೆ ಹಚ್ಚುವುದರಿಂದ ಗಾಯ ಬೇಗನೇ ವಾಸಿಗಾಗುತ್ತದೆ

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆದು ಪ್ರಯೋಗ ಮಾಡಿ.

ಶುಂಠಿ ತಿನ್ನುವುದರಿಂದ ಈ ರೋಗಗಳು ಬರಲ್ಲ

Follow Us on :-