ಕೇರಳದ ನಾಡಹಬ್ಬ ಓಣಂ ಬಂದಿದ್ದು, ಕೇರಳೀಯರು ಹಬ್ಬಕ್ಕಾಗಿ ಭೂರಿ ಭೋಜನ ತಯಾರಿಸುತ್ತಾರೆ. ಅದರಲ್ಲಿ ನೇಂದ್ರ ಬಾಳೆಹಣ್ಣಿನ ಪಾಯಸವೂ ಒಂದು. ನೇಂದ್ರ ಬಾಳೆಹಣ್ಣಿನ ಪಾಯಸ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ
Photo Credit: Instagram, AI Image
ಮೊದಲಿಗೆ ನಾಲ್ಕು ಸಿಪ್ಪೆ ಕಪ್ಪಾಗುವಷ್ಟು ಮಾಗಿದ ನೇಂದ್ರ ಬಾಳೆಹಣ್ಣನ್ನು ಸಿಪ್ಪೆ ತೆಗೆದು ಬೇಯಿಸಿ
ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಪೇಸ್ಟ್ ನಂತೆ ಮಾಡಿಕೊಳ್ಳಿ
ಇದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಬಾಣಲೆಗೆ ಹಾಕಿ ಚೆನ್ನಾಗಿ ತಿರುವುತ್ತಾ ಇರಿ
10 ನಿಮಿಷ ಬೇಯಿಸಿದ ಬಳಿಕ ಮೂರನೇ ಕಾಯಿ ಹಾಲು ಹಾಕಿ ಸ್ವಲ್ಪ ಹೊತ್ತು ತಿರುವಿಕೊಳ್ಳಿ
ಕೆಲವು ನಿಮಿಷದ ಬಳಿಕ ಮತ್ತೆ ಎರಡನೇ ಹಾಲು ಹಾಕಿ ಅದಕ್ಕೆ ಏಲಕ್ಕಿ ಪೌಡರ್ ಹಾಕಿ ಮತ್ತಷ್ಟು ತಿರುವಿ
ಇದು ಚೆನ್ನಾಗಿ ಕುದಿ ಬಂದ ಬಳಿಕ ಮೊದಲನೇ ಹಾಲು ಸೇರಿಸಿ ಒಂದು ಕುದಿ ಬರುವಷ್ಟು ಕುದಿಸಿ
ಬಳಿಕ ಇದಕ್ಕೆ ಒಣಕೊಬ್ಬರಿಯ ಚೂರು, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದು ಸೇರಿಸಿ