ಬಾಳೆಹಣ್ಣು ಸೇವನೆ ಮಾಡುವಾಗ ಅದರ ಸಿಪ್ಪೆಯನ್ನು ತೆಗೆದು ಡಸ್ಟ್ ಬಿನ್ ಗೆ ಎಸೆದು ಬಿಡುತ್ತೇವೆ. ಆದರೆ ಅದರ ಸಿಪ್ಪೆಯನ್ನು ಮರುಬಳಕೆ ಮಾಡಿದರೆ ಅನೇಕ ಪ್ರಯೋಜನಗಳಿವೆ. ಯಾವೆಲ್ಲಾ ರೀತಿ ಮರುಬಳಕೆ ಮಾಡಬಹುದು ಇಲ್ಲಿ ನೋಡಿ.
Photo Credit: Instagram
ಬಾಳೆಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ನೆನೆ ಹಾಕಿ ಗಿಡಗಳಿಗೆ ಹಾಕಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ
ಫೈಬರ್ ಅಂಶ ಹೇರಳವಾಗಿರುವ ಕಾರಣ ಬಾಳೆಹಣ್ಣಿನ ಸಿಪ್ಪೆ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ
ಬಾಳೆಹಣ್ಣಿನ ಸಿಪ್ಪೆಯಿಂದ ಹಳದಿಗಟ್ಟಿದ ಹಲ್ಲನ್ನು ಉಜ್ಜಿದರೆ ಹಲ್ಲು ಬಿಳಿಯಾಗುತ್ತದೆ
ಬಾಳೆಹಣ್ಣಿನ ಸಿಪ್ಪೆಯಿಂದ ಸೊಳ್ಳೆ ಕಡಿದ ಜಾಗವನ್ನು ಉಜ್ಜಿಕೊಳ್ಳುವುದರಿಂದ ಕಲೆ ಮಾಯವಾಗುತ್ತದೆ
ಬಾಳೆಹಣ್ಣಿನ ಸಿಪ್ಪೆಯನ್ನು ಚರ್ಮಕ್ಕೆ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗುತ್ತದೆ
ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಹಚ್ಚಿಕೊಂಡರೆ ಗಾಯದಿಂದಾದ ಕಲೆ ಹೋಗುತ್ತದೆ
ನೆನಪಿಡಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.