ದಿಡೀರ್ ಉಪ್ಪಿನ ಕಾಯಿ ರೆಸಿಪಿ

ಊಟಕ್ಕೆ ಉಪ್ಪಿನಕಾಯಿ ಇಲ್ಲದೇ ಹೋದರೆ ಏನೋ ರುಚಿ ಕಡಿಮೆಯಾದಂತೆ ಅನಿಸಬಹುದು. ಮನೆಯಲ್ಲಿಯೇ ನಾವು ದಿಡೀರ್ ಆಗಿ ಕೆಲವೊಂದು ತರಕಾರಿಗಳನ್ನು ಬಳಸಿ ಉಪ್ಪಿನ ಕಾಯಿ ಮಾಡಬಹುದು. ದಿಡೀರ್ ಉಪ್ಪಿನ ಕಾಯಿ ರೆಸಿಪಿ ಇಲ್ಲಿದೆ.

Photo Credit: Social Media

ಮಂಗಳೂರು ಸೌತೆ ಎಳೆಯದು, ಕ್ಯಾರೆಟ್, ಹಸಿಮೆಣಸಿನಕಾಯಿ, ನಿಂಬೆಹಣ್ಣು, ತೊಂಡೆಕಾಯಿ ಬೇಕಾಗುತ್ತದೆ

ಅರ್ಧ ಮಂಗಳೂರು ಸೌತೆ, ಒಂದು ಕ್ಯಾರೆಟ್, ನಿಂಬೆ, ನಾಲ್ಕೈದು ಹಸಿಮೆಣಸು, ಆರು ತೊಂಡೆಕಾಯಿ ಚಿಕ್ಕದಾಗಿ ಕತ್ತರಿಸಿ

ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕೆದಕಿ ಸ್ವಲ್ಪ ಹೊತ್ತು ಉಪ್ಪು ಹಿಡಿಯಲು ಬಿಡಿ

ಈ ವೇಳೆ ಅರ್ಧ ಕಪ್ ಸಾಸಿವೆಯನ್ನು ಪುಡಿ ಮಾಡಿಕೊಳ್ಳಿ, ಇದಕ್ಕೆ ಕಾಲು ಕಪ್ ನಷ್ಟು ಖಾರದ ಪುಡಿ ಬೆರೆಸಿ

ಈ ಮಿಶ್ರಣದ ಜೊತೆಗೆ ಎರಡು ಚಮಚ ಅರಶಿನ ಪುಡಿ, ಸ್ವಲ್ಪ ಇಂಗು ಸೇರಿಸಿ ಹೋಳುಗಳಿಗೆ ಚೆನ್ನಾಗಿ ಬೆರೆಸಿ

ಉಪ್ಪು ಕಡಿಮೆಯೆನಿಸಿದರೆ ಉಪ್ಪು ಮತ್ತು ನೀರು ನೀರಾಗಿ ಬೇಕೆಂದರೆ ಸ್ವಲ್ಪ ತಣ್ಣಗಿನ ನೀರು ಬೆರೆಸಬಹುದು

ಈ ರೀತಿ ಮಾಡಿದರೆ ದಿಡೀರ್ ಆಗಿ ಬಳಕೆ ಮಾಡಬಹುದಾದ ಮಿಕ್ಸೆಡ್ ತರಕಾರಿಗಳ ಉಪ್ಪಿನಕಾಯಿ ರೆಡಿ

ಮೂಳೆ ಮುರಿತಕ್ಕೆ ಕಾರಣವಾಗಬಲ್ಲ ಆಹಾರಗಳು

Follow Us on :-