ಮನೆಯಲ್ಲಿ ಹೆಚ್ಚು ತರಕಾರಿಗಳು ಉಳಿದಿಲ್ಲವೆಂದರೆ ತಕ್ಷಣಕ್ಕೆ ಸಾಂಬಾರ್ ಮಾಡಲು ಹೆಚ್ಚು ಯೋಚನೆ ಮಾಡಬೇಕಾಗಿಲ್ಲ. ಕೆಲವೇ ವಸ್ತುಗಳನ್ನು ಬಳಸಿ ಸುಲಭವಾಗಿ ಸಾಂಬಾರ್ ಮಾಡಬಹುದು. ದಿಡೀರ್ ಸಾಂಬರ್ ರೆಸಿಪಿ ಇಲ್ಲಿದೆ ನೋಡಿ.
Photo Credit: Instagram
ಹೆಸರು ಬೇಳೆ, ಧನಿಯಾ ಪುಡಿ, ಟೊಮೆಟೊ, ಹಸಿಮೆಣಸು, ಒಗ್ಗರಣೆ ಸಾಮಗ್ರಿಗಳು ಇದ್ದರೆ ಸಾಕು
ಮೊದಲಿಗೆ ಅರ್ಧ ಕಪ್ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ
ಇದಕ್ಕೆ ಹೆಚ್ಚಿದ ಟೊಮೆಟೊ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಹಾಕಿ
ಇದಕ್ಕೆ ಅರಿಶಿನ ಪುಡಿ, ಖಾರ ಬೇಕಿದ್ದರೆ ಖಾರದಪುಡಿ ಹಾಕಿ ಕುಕ್ಕರ್ ನಲ್ಲಿ ನಾಲ್ಕು ವಿಷಲ್ ಕೂಗಿಸಿ
ಈಗ ಬೆಂದ ಬೇಳೆ ಮತ್ತು ಹೋಳುಗಳನ್ನು ಚೆನ್ನಾಗಿ ಹಿಚುಕಿ ಬೇಕಾದಷ್ಟು ನೀರು ಸೇರಿಸಿಕೊಳ್ಳಿ
ಇದನ್ನು ಚೆನ್ನಾಗಿ ಕುದಿಯಲು ಬಿಟ್ಟು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ
ಕೊನೆಯಲ್ಲಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಕೊಟ್ಟರೆ ದಿಡೀರ್ ಸಾಂಬಾರ್ ರೆಡಿ