ಸ್ವೀಟ್ ಕಾರ್ನ್ ಬಳಸಿ ಈ ರೀತಿ ದಿಡೀರ್ ದೋಸೆ ಮಾಡಿ

ಸ್ವೀಟ್ ಕಾರ್ನ್ ಮನೆಗೆ ತಂದಿದ್ದರೆ ಅದರಿಂದ ರುಚಿಕರವಾಗಿ ಮತ್ತು ದಿಡೀರ್ ಆಗಿ ದೋಸೆ ಮಾಡಬಹುದು. ಇದಕ್ಕೆ ಹೆಚ್ಚು ವಸ್ತುಗಳೂ ಬೇಕಾಗುವುದಿಲ್ಲ. ಸ್ವೀಟ್ ಕಾರ್ನ್ ನಿಂದ ದಿಡೀರ್ ಆಗಿ ದೋಸೆ ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಸ್ವೀಟ್ ಕಾರ್ನ್ ಕಾಳುಗಳನ್ನು ಬಿಡಿಸಿ ಒಂದು ಕಪ್ ಆಗುವಷ್ಟು ತೊಳೆದಿಟ್ಟುಕೊಳ್ಳಿ

ಒಂದು ಕಪ್ ದೋಸೆ ಅಕ್ಕಿಯನ್ನು ಎರಡು-ಮೂರು ಗಂಟೆ ನೀರಿನಲ್ಲಿ ನೆನೆ ಹಾಕಿ

ಈಗ ಮಿಕ್ಸಿ ಜಾರ್ ನಲ್ಲಿ ಸ್ವೀಟ್ ಕಾರ್ನ್, ಶುಂಠಿ, ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ

ಬಳಿಕ ಅದೇ ಮಿಕ್ಸಿಯಲ್ಲಿ ನೆನೆಸಿದ ದೋಸೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ

ಈಗ ರುಬ್ಬಿದ ಸ್ವೀಟ್ ಕಾರ್ನ್ ಮಿಶ್ರಣ ಮತ್ತು ಅಕ್ಕಿಯನ್ನು ಮಿಕ್ಸ್ ಮಾಡಿ

ಹಿಟ್ಟನ್ನು ತೀರಾ ತೆಳ್ಳಗೆ ಮಾಡದೇ ಉದ್ದಿನ ದೋಸೆ ಹಿಟ್ಟಿನಷ್ಟು ದಪ್ಪಗೆ ಮಾಡಿಕೊಳ್ಳಿ

ಇದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿಕೊಂಡು ಕಾದ ಕಾವಲಿ ಮೇಲೆ ಹುಯ್ದರೆ ದೋಸೆ ರೆಡಿ

ವಾಶ್ ಬೇಸಿನ್ ಫಳ ಫಳ ಹೊಳೆಯಬೇಕಾದರೆ ಹೀಗೆ ಮಾಡಿ

Follow Us on :-