ದಿಡೀರ್ ಆಗಿ ಮಾಡಬಹುದಾದ ಗರಂ ರಸಂ ರೆಸಿಪಿ

ಮಳೆ ಬಂದಾಗ ಗಂಟಲು ನೋವು, ಕೆರೆತವಿದ್ದರೆ ಗರಂ ಮತ್ತು ಬಿಸಿಯಾಗಿ ಏನಾದರೂ ಸೇವಿಸಲು ಇಷ್ಟಪಡುತ್ತೇವೆ. ಅದಕ್ಕಾಗಿ ಬೇಳೆಯನ್ನೂ ಹಾಕದೇ ಸುಲಭವಾಗಿ ಮಾಡಬಹುದಾದ ರಸಂ ರೆಸಿಪಿಯೊಂದು ಇಲ್ಲಿದೆ ನೋಡಿ.

Photo Credit: Instagram, Facebook

ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಇಂಗು ಹಾಕಿ ಫ್ರೈ ಮಾಡಿ

ಇದು ಫ್ರೈ ಆದ ಬಳಿಕ ಸ್ವಲ್ಪ ಕರಿಬೇವು, ಹಸಿಮೆಣಸು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ

ಇವಿಷ್ಟು ಫ್ರೈ ಆದ ಬಳಿಕ ಕಟ್ ಮಾಡಿರುವ ಒಂದು ಟೊಮೆಟೊ ಹೋಳುಗಳನ್ನು ಸೇರಿಸಿ

ಈ ಹೋಳುಗಳನ್ನು ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಬೇಯಲು ಬಿಡಿ

ಈಗ ಒಂದು ಮಿಕ್ಸಿ ಜಾರಿಗೆ ಕಾಳುಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಹಾಕಿ

ಇದಕ್ಕೆ ನಾಲ್ಕು ಪೀಸ್ ಟೊಮೆಟೊ ಹೋಳನ್ನೂ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಬೆಂದಿರುವ ಟೊಮೆಟೊ ಹೋಳಿಗೆ ರುಬ್ಬಿರುವ ಪೇಸ್ಟನ್ನೂ ಸೇರಿಸಿ

ಇದಕ್ಕೆ ಬೇಕಾದಷ್ಟು ನೀರು, ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ರಸಂ ರೆಡಿ

ಪಟಾಕಿ ಕಣ್ಣಿಗೆ ಬಿದ್ದ ತಕ್ಷಣ ಏನು ಮಾಡಬೇಕು

Follow Us on :-