ಕೆಲವೊಮ್ಮೆ ದೋಸೆ ಹಿಟ್ಟನ್ನು ಮೊದಲೇ ತಯಾರಿಸಲು ಸಮಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸುಲಭವಾಗಿ ಬಹಳ ಬೇಗನೇ ದೋಸೆ ಹಿಟ್ಟು ತಯಾರಿಸಿ ರುಚಿಕರವಾದ ದೋಸೆ ಸವಿಯಲು ಇಲ್ಲೊಂದು ದೋಸೆ ರೆಸಿಪಿ ನೀಡುತ್ತಿದ್ದೇವೆ. ಮಾಡಿ ನೋಡಿ.
Photo Credit: Social Media
ಟೊಮೆಟೊ, ಗೋಧಿ ಹಿಟ್ಟು, ಕಡ್ಲೆ ಹಿಟ್ಟು, ರವೆ ಹಾಗೂ ಸ್ವಲ್ಪ ಅಕ್ಕಿ ಹಿಟ್ಟು ಜೊತೆಗೆ ಮೊಸರು ಬೇಕಾದ ವಸ್ತುಗಳು
ಒಂದು ಕಪ್ ನಷ್ಟು ಟೊಮೆಟೊವನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಟ್ಟುಕೊಳ್ಳಿ
ಈಗ ಒಂದು ಪಾತ್ರೆಗೆ ಎರಡು ಕಪ್ ಗೋದಿ ಹಿಟ್ಟು, ಕಾಲು ಕಪ್ ಕಡ್ಲೆ ಹಿಟ್ಟು, ಅಷ್ಟೇ ರವೆ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಸ್ವಲ್ಪ ಮೊಸರು, ಸ್ವಲ್ಪ ಜೀರಿಗೆ, ಟೊಮೆಟೊ ಪೇಸ್ಟ್, ರುಚಿಗೆ ತಕ್ಕ ಉಪ್ಪು ಮತ್ತು ನೀರು ಹಾಕಿ
ಇದನ್ನು ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ತಿರುವಿ ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪು, ಈರುಳ್ಳಿ ಸೇರಿಸಿ
ಒಂದು ಕಾದ ತವಾ ಮೇಲೆ ಎಣ್ಣೆ ಹಚ್ಚಿ ಬಿಸಿಯಾದಾಗ ದೋಸೆ ಹುಯ್ದುಕೊಳ್ಳಿ
ಟೊಮೆಟೊ ಕೂಡಾ ಹಾಕುವುದರಿಂದ ದೋಸೆಗೆ ಒಳ್ಳೆಯ ಕಲರ್ ಜೊತೆಗೆ ಘಮವೂ ಬರುತ್ತದೆ