ಮಳೆಗಾಲ ಬಂತೆಂದರೆ ಸೋಂಕಿನಿಂದ ಜ್ವರ, ಶೀತ, ಕೆಮ್ಮು ಎಂದು ಹಲವು ರೋಗಗಳು ದೇಹ ಪ್ರವೇಶಿಸುತ್ತವೆ. ಇದನ್ನು ತಡೆಯಲು ದೇಹದಲ್ಲಿ ರೋಗ ನಿರೋಧ ಶಕ್ತಿ ಬೇಕು. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಪಾನೀಯಗಳನ್ನು ಸೇವಿಸಬಹುದು.
Photo Credit: Social Media
ಶುಂಠಿಯಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿದ್ದು ಪ್ರತಿನಿತ್ಯ ಶುಂಠಿ ಕಷಾಯ ಮಾಡಿಕೊಂಡು ಸೇವಿಸಿ.
ಜೇನು ತುಪ್ಪದಲ್ಲಿ ರೋಗನಿರೋಧಕ ಅಂಶ ಹೇರಳವಾಗಿದ್ದು ಬಿಸಿ ನೀರಿಗೆ ಸೇರಿಸಿಕೊಂಡು ಸೇವಿಸಿ
ಒಂದು ಲೋಟ ಬಿಸಿ ನೀರಿಗೆ ಚಿಟಿಕಿ ಅರಶಿನವನ್ನು ಸೇರಿಸಿ ಕುಡಿಯುವುದರಿಂದ ರೋಗನಿರೋಧಕ ಹೆಚ್ಚುತ್ತದೆ
ಶುಂಠಿ ಸೇರಿಸಿದ ಚಹಾ ಅಥವಾ ಕಾಫಿಯನ್ನು ಪ್ರತಿನಿತ್ಯ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿ
ಕಾಳುಮೆಣಸು ಮತ್ತು ಜೀರಿಗೆ ಸೇರಿಸಿ ಕಷಾಯ ಮಾಡಿಕೊಂಡು ಕುಡಿದರೆ ರೋಗ ನಿರೋಧಕ ಹೆಚ್ಚುತ್ತದೆ
ಒಂದು ಲೋಟ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅರ್ಧ ಪ್ರಮಾಣಕ್ಕೆ ತಂದು ಸೇವಿಸಿ
ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.