ಕಿತ್ತಳೆ ಸಿಪ್ಪೆಯಿಂದ ಗಿಡಕ್ಕೆ ಗೊಬ್ಬರ ತಯಾರಿಸುವುದು ಹೇಗೆ
ನಿಮ್ಮ ಟೆರೇಸ್ ಗಾರ್ಡನ್ ನಲ್ಲಿರುವ ಪಾಟ್ ಗಳಿಗೆ ಮನೆಯಲ್ಲಿಯೇ ರಸಗೊಬ್ಬರ ತಯಾರಿಸಿಕೊಳ್ಳಬಹುದು. ಅದರಲ್ಲೂ ನೀವು ತಿಂದು ಬಿಸಾಕುವ ಕಿತ್ತಳೆ ಸಿಪ್ಪೆಯಿಂದ ಮನೆಯಲ್ಲಿಯೇ ರಸಗೊಬ್ಬರ ತಯಾರಿಸಬಹುದು. ಹೇಗೆ ನೋಡಿ.
Photo Credit: Instagram, AI image
ಕಿತ್ತಳೆ ಹಣ್ಣು ತಿಂದ ಬಳಿಕ ಸಿಪ್ಪೆ ಬಿಸಾಡದೇ ಅದನ್ನು ಮರು ಬಳಕೆ ಮಾಡಿಕೊಳ್ಳಬಹುದು
ಕಿತ್ತಳೆ ಸಿಪ್ಪೆ ಗಿಡಗಳಿಗೆ ಅತ್ಯುತ್ತಮ ಪೋಷಕಾಂಶ ಒದಗಿಸುವ ರಸಗೊಬ್ಬರವಾಗಬಹುದು
ತಿಂದು ಬಿಸಾಕುವ ಕಿತ್ತಳೆ ಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಬಿಸಿಲಿಗೆ ಒಣಗಲು ಬಿಡಿ
ಇದು ಚೆನ್ನಾಗಿ ಒಣಗಿದ ಬಳಿಕ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಿ
ಪಾಟ್ ನಲ್ಲಿ ಗಿಡ ನೆಡಲು ಮಣ್ಣು ಹಾಕುವಾಗ ಈ ಪುಡಿಯನ್ನು ಸೇರಿಸಿಕೊಳ್ಳಿ
ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ, ಫೈಬರ್, ಕ್ಯಾಲ್ಶಿಯಂನಂತಹ ಅಂಶ ಹೇರಳವಾಗಿದೆ
ಇದು ಗಿಡಕ್ಕೆ ಸಾಕಷ್ಟು ಪೋಷಕಾಂಶ ಒದಗಿಸಿ ಚೆನ್ನಾಗಿ ಫಲ ಕೊಡಲು ಸಹಾಯವಾಗುತ್ತದೆ