ಪಾಟ್ ನಲ್ಲಿ ಬಾಡಿದ ಗಿಡವನ್ನು ಚಿಗುರಿಸುವುದು ಹೇಗೆ

ತಾರಸಿ ಕೃಷಿ ಮಾಡುವವರಿಗೆ ಪಾಟ್ ನಲ್ಲಿ ಗಿಡ ಇದ್ದಕ್ಕಿದ್ದಂತೆ ಬಾಡಿ ಸಾಯುವ ಸ್ಥಿತಿಗೆ ಬಂದರೆ ಏನು ಮಾಡೋದು ಎಂಬ ಚಿಂತೆ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಗಿಡವನ್ನು ಮತ್ತೆ ಚಿಗುರಿಸಲು ಇಲ್ಲಿದೆ ಟಿಪ್ಸ್.

Photo Credit: Instagram, Facebook

ಪಾಟ್ ನಲ್ಲಿರುವ ಮಣ್ಣು ಗಟ್ಟಿಯಾಗಿದ್ದರೆ ಗಿಡದ ಬೇರಿಗೆ ನೋವಾಗದಂತೆ ಕೆದಕಿ ಸಡಿಲಗೊಳಿಸಿ

ಅಗತ್ಯ ಬಂದರೆ ಗಿಡವನ್ನು ಒಮ್ಮೆ ಹುಷಾರಾಗಿ ಕಿತ್ತು ಹೊಸ ಮಣ್ಣು ಹಾಕಿ ನೆಡಿ

ಎಲೆಗಳಿಗೆ ಯಾವುದಾದರೂ ರೋಗ ಬಂದಿದ್ದರೆ ಅಂತಹ ಎಲೆಗಳನ್ನು ಚಿವುಟಿ ಹಾಕಿ

ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೀರು ಸಿಂಪಡಿಸುವುದನ್ನು ಮರೆಯಬೇಡಿ

ಗಿಡದಲ್ಲಿ ಒಣಗಿದ ಎಲೆ, ಕಾಂಡಗಳಿದ್ದರೆ ಅವುಗಳನ್ನು ಕಿತ್ತು ಬುಡಕ್ಕೆ ಗೊಬ್ಬರವಾಗಿ ಹಾಕಿ

ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರ ಬಳಕೆ ಮಾಡಿ

ಗಿಡಗಳಿಗೆ ಔಷಧಿ ಹೊಡೆಯುತ್ತಿದ್ದರೆ ಅದು ಅತಿಯಾದರೆ ಗಿಡ ಬಾಡುವ ಸಂಭವವಿರುತ್ತದೆ

ರೇಝರ್ ನಿಂದ ಕಂಕುಳ ಕೂದಲು ತೆಗೆಯಲು ಟಿಪ್ಸ್

Follow Us on :-