ಫ್ರಿಡ್ಜ್ ನಲ್ಲಿಟ್ಟರೂ ರವೆ ಹಾಳಾಗುತ್ತಿದ್ದರೆ ಹೀಗೆ ಮಾಡಿ

ಮನೆಗೆ ಅಗತ್ಯಕ್ಕಿಂತ ಹೆಚ್ಚು ರವೆ ತಂದರೆ ಅದನ್ನು ಹಾಳಾಗದಂತೆ ಇಡುವುದೇ ದೊಡ್ಡ ಕೆಲಸ. ಕೆಲವೊಮ್ಮೆ ಫ್ರಿಡ್ಜ್ ನಲ್ಲಿಟ್ಟರೂ ರವೆ ಹಾಳಾಗುತ್ತದೆ. ಹಾಗಿದ್ದರೆ ರವೆ ಹಾಳಾಗದಂತೆ ಸಂರಕ್ಷಿಸಿಡಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram, WD

ರವೆ ಹೆಚ್ಚು ಎಂದರೆ ಒಂದು ತಿಂಗಳಿಗಿಂತ ಹೆಚ್ಚು ಹಾಳಾಗದೇ ಉಳಿಯದು

ಇದಕ್ಕಾಗಿ ರವೆ ತಂದ ತಕ್ಷಣ ಅದನ್ನು ಬಾಣಲೆಗೆ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು

ರವೆಯನ್ನು ಕೊಂಚ ಹಸಿ ವಾಸನೆ ಹೋಗುವವರೆಗೆ ಹುರಿದುಕೊಂಡರೆ ಸಾಕು

ಬಳಿಕ ಇದನ್ನು ಒಂದು ಪೇಪರ್ ನಲ್ಲಿ ಹರಡಿ ಸಂಪೂರ್ಣವಾಗಿ ಬಿಸಿ ಆರಲು ಬಿಡಬೇಕು

ಈಗ ಇದನ್ನು ಗಾಳಿಯಾಡದ ಒಂದು ಬಾಕ್ಸ್ ನಲ್ಲಿ ತುಂಬಿಕೊಳ್ಳಬೇಕು

ಅಗತ್ಯವಿದ್ದರೆ ರವೆ ಡಬ್ಬಾದೊಳಗೆ ಎರಡು ಕಹಿಬೇವಿನ ಎಲೆಯನ್ನು ಹಾಕಬಹುದು

ಈಗ ಈ ಡಬ್ಬಿಯನ್ನು ಫ್ರಿಡ್ಜ್ ನಲ್ಲಿಟ್ಟುಕೊಂಡರೆ ಅಷ್ಟು ಬೇಗ ಹಾಳಾಗದು

ಸ್ಕೂಲ್ ಬ್ಯಾಗ್ ತೊಳೆಯುವುದು ಹೇಗೆ

Follow Us on :-