ಸ್ಕೂಲ್ ಬ್ಯಾಗ್ ತೊಳೆಯುವುದು ಹೇಗೆ

ಮಕ್ಕಳು ಪ್ರತಿನಿತ್ಯ ಶಾಲೆಗೆ ಕೊಂಡೊಯ್ಯುವ ಸ್ಕೂಲ್ ಬ್ಯಾಗ್ ಬೇಗನೇ ಕೊಳೆಯಾಗುವುದು ಸಹಜ. ಆದರೆ ಇದನ್ನು ಸುಲಭವಾಗಿ ಮತ್ತು ಕೊಳೆಯೆಲ್ಲಾ ಹೋಗುವಂತೆ ತೊಳೆಯುವುದು ಹೇಗೆ ಇಲ್ಲಿದೆ ಉಪಾಯ.

Photo Credit: Instagram

ಎರಡು ವಾರಗಳಿಗೊಮ್ಮೆಯಾದರೂ ಶಾಲೆಯ ಬ್ಯಾಗ್ ಗಳನ್ನು ತೊಳೆಯುತ್ತಿದ್ದರೆ ಉತ್ತಮ

ಸ್ಕೂಲ್ ಬ್ಯಾಗ್ ನಲ್ಲಿ ಪೆನ್ನು, ಪೆನ್ಸಿಲ್ ಮತ್ತು ಕಲರ್ ಕಲೆಗಳು ಉಳಿದುಕೊಳ್ಳುತ್ತವೆ

ಇದನ್ನು ಹೋಗಲಾಡಿಸಲು ಮೊದಲು ಬ್ಯಾಗ್ ನ್ನು ಸೋಪ್ ನೀರಿನಲ್ಲಿ ಒಂದು ಗಂಟೆ ನೆನೆಸಿಡಬೇಕು

ಸೋಪ್ ನೀರಿಗೆ ಸ್ವಲ್ಪ ಹದ ಬಿಸಿ ನೀರು ಹಾಕಿದರೆ ಕಲೆ ಹೋಗಲು ಸುಲಭವಾಗುತ್ತದೆ

ಬಳಿಕ ಕೈಯಿಂದ ಮೃದುವಾದ ಬ್ರಷ್ ಬಳಸಿ ಕಲೆಯಿರುವ ಭಾಗವನ್ನು ತೊಳೆದುಕೊಳ್ಳಿ

ಈಗ ಇನ್ನೊಮ್ಮೆ ಶುದ್ಧವಾದ ನೀರಿನಲ್ಲಿ ಅರ್ಧಗಂಟೆ ನೆನೆಸಿಡಿ

ಬಳಿಕ ನೀರನ್ನು ಚೆನ್ನಾಗಿ ಕೊಡವಿಕೊಂಡು ಬಿಸಿಲಿಗೆ ಆರಿಸಿದರೆ ಬ್ಯಾಗ್ ಶುಚಿಯಾಗುತ್ತದೆ

ಕೇರಳ ಶೈಲಿಯ ಬಾಯಲ್ಲಿ ನೀರೂರಿಸುವ ನೆಲ್ಲಿಕಾಯಿ ಉಪ್ಪಿನಕಾಯಿ

Follow Us on :-