ನಾವು ಪ್ರತಿನಿತ್ಯ ಬಳಸುವ ಕುಕ್ಕರ್ ನಿಂದ ಅಕ್ಕಿ, ಬೇಳೆ, ತರಕಾರಿ ಏನೇ ಇಟ್ಟರೂ ನೀರೆಲ್ಲಾ ಹೊರಗೆ ಬಂದು ಅಧ್ವಾನವಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಅದನ್ನು ತಡೆಯಲು ಏನು ಮಾಡಬಹುದು ನೋಡಿ.
Photo Credit: Social Media
ಕುಕ್ಕರ್ ನ ಮುಚ್ಚಳ, ಲಿಡ್ ಅಥವಾ ವಿಶಲ್ ನ ತೂತಿನಲ್ಲಿ ಸಮಸ್ಯೆಯಿದ್ದಾಗ ಲೀಕ್ ಆಗಬಹುದು
ಕುಕ್ಕರ್ ನ ವಿಶಲ್ ಮತ್ತು ತೂತಿನ ಭಾಗವನ್ನು ಪ್ರತಿ ಬಾರಿ ಬಳಕೆ ನಂತರ ಕ್ಲೀನ್ ಮಾಡಿ
ಕುಕ್ಕರ್ ಮುಚ್ಚಳ ತೆಗೆದ ಬಳಿಕ ಅದರ ಗ್ಯಾಸ್ಕೆಟ್ ನ್ನು ತಂಪು ನೀರಿನಲ್ಲಿ ಅದ್ದಿಡಿ
ಕುಕ್ಕರ್ ನ ಗ್ಯಾಸ್ಕೆಟ್ ನ್ನು ಫ್ರಿಡ್ಜ್ ನಲ್ಲಿಡುವುದರಿಂದ ಅದು ಬಿಗಿ ಕಳೆದುಕೊಳ್ಳುವುದಿಲ್ಲ
ಸೇಫ್ಟೀ ವಾಲ್ ನಲ್ಲಿ ದೋಷವಿದ್ದರೆ ಕುಕ್ಕರ್ ಲೀಕೇಜ್ ಸಮಸ್ಯೆಯಾಗಬಹುದು
ಕುಕ್ಕರ್ ನ ಗ್ಯಾಸ್ಕೆಟ್ ಗೆ ಕೊಂಚ ಎಣ್ಣೆ ಸವರಿ ಇಟ್ಟರೆ ಸಮಸ್ಯೆ ಸರಿಯಾಗಬಹುದು
ಕುಕ್ಕರ್ ಬಳಕೆ ಮಾಡುವ ಮುನ್ನ ಗ್ಯಾಸ್ಕೆಟ್ ಗೆ ನೀರು ಹಾಕಿ ಒದ್ದೆ ಮಾಡಿ ಮುಚ್ಚಳ ಮುಚ್ಚಿ