ಬನಿಯನ್ ತೊಳೆದರೂ ವಾಸನೆ ಬರುತ್ತಿದೆಯೇ ಹೀಗೆ ಮಾಡಿ

ಪುರುಷರು ತೊಡುವ ಒಳ ಅಂಗಿ, ಬನಿಯನ್ ಎಷ್ಟೇ ತೊಳೆದರೂ ವಾಸನೆ ಬರುತ್ತಿದೆಯೇ ಎಂಬ ಚಿಂತೆಯೇ? ಹಾಗಿದ್ದರೆ ಬನಿಯನ್ ತೊಳೆಯುವಾಗ ಈ ಕೆಲವು ಟಿಪ್ಸ್ ಅನುಸರಿಸಿ.

Photo Credit: Instagram

ಬನಿಯನ್ ನಮ್ಮ ದೇಹದ ಬೆವರನ್ನು ಹೀರಿಕೊಳ್ಳುವುದರಿಂದ ಒಂದಕ್ಕಿಂತ ಹೆಚ್ಚು ಬಾರಿ ಬಳಸಬೇಡಿ

ಬನಿಯನ್ ಸರಿಯಾಗಿ ತೊಳೆಯದೇ ಇದ್ದರೆ ಅಲರ್ಜಿ, ಚರ್ಮದ ಸಮಸ್ಯೆಗಳು ಬರಬಹುದು

ಬಳಸಿದ ಬನಿಯನ್ ನ್ನು ರಾಶಿ ಮಾಡಿಟ್ಟುಕೊಳ್ಳದೇ ತಕ್ಷಣವೇ ಡೆಟಾಲ್ ಹಾಕಿದ ಹಸ ಬಿಸಿ ನೀರಿನಲ್ಲಿ ಅದ್ದಿಡಿ

ಒಂದು ಗಂಟೆ ಬಿಟ್ಟು ಬನಿಯನ್ ನ್ನು ಮಿಷನ್ ಬಳಸದೇ ಕೈಯಿಂದ ಚೆನ್ನಾಗಿ ಸೋಪ್ ಹಾಕಿ ತೊಳೆಯಿರಿ

ಯಾವುದೇ ಕಾರಣಕ್ಕೂ ಬನಿಯನ್ ಗೆ ವಾಷಿಂಗ್ ಬ್ರಷ್ ಬಳಸಬೇಡಿ, ಇದರಿಂದ ಬನಿಯನ್ ಬೇಗ ಹಾಳಾಗಬಹುದು

ಬನಿಯನ್ ತೊಳೆದ ಬಳಿಕ ಅದನ್ನು ಚೆನ್ನಾಗಿ ಗಾಳಿ, ಬಿಸಿಲು ಬರುವ ಜಾಗದಲ್ಲಿ ಒಣಗಲು ಹಾಕಿ

ಬಿಸಿಲಿಗೆ ಒಣಗುವುದರಿಂದ ಅದರ ವಾಸನೆ ಹೋಗಿ ಬನಿಯನ್ ಫ್ರೆಶ್ ಫೀಲ್ ಕೊಡುತ್ತದೆ

ಆಲೂಗಡ್ಡೆ ತಿಂದರೆ ಗ್ಯಾಸ್ ಆಗುತ್ತಾ, ಹೀಗೆ ಮಾಡಿ

Follow Us on :-