ಬೇಸಿಗೆಯಲ್ಲಿ ಬಾಡಿ ಹೀಟ್ ಕಡಿಮೆ ಮಾಡಲು ಟಿಪ್ಸ್

ಬೇಸಿಗೆಯಲ್ಲಿ ವಿಪರೀತ ಸೂರ್ಯನ ತಾಪಕ್ಕೆ ದೇಹದ ಉಷ್ಣತೆಯೂ ಹೆಚ್ಚಾಗುವುದು. ದೇಹ ತಾಪ ಹೆಚ್ಚಿದಾಗ ಸೆಕೆ, ಉಷ್ಣ ಸಂಬಂಧೀ ಆರೋಗ್ಯ ಸಮಸ್ಯೆಯಾಗುವುದು ಸಹಜ. ಹಾಗಿದ್ದರೆ ದೇಹ ತಂಪು ಮಾಡಲು ಏನು ಮಾಡಬೇಕು ನೋಡೋಣ.

credit: social media

ದೇಹ ತಂಪಾಗಿರಲು ಸಾಕಷ್ಟು ನೀರು ಅಥವಾ ಪಾನೀಯ ಸೇವಿಸಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬೇಕು

ಆದಷ್ಟು ತಂಪಾದ ನೆಲದ ಮೇಲೆ ಮಲಗಿ ಮತ್ತು ಬಿಸಿಲಿನ ತಾಪ ತಾಕದಂತೆ ನೆರಳಿನಲ್ಲಿ ಓಡಾಡಿ

ಕಾಲಿನ ಮೂಲಕವೇ ದೇಹದ ಉಷ್ಣತೆ ಹೆಚ್ಚಾಗುವುದರಿಂದ ಕಾಲುಗಳನ್ನು ತಂಪು ನೀರಿನಲ್ಲಿ ಅದ್ದಿಡಿ

ರಾತ್ರಿ ಮಲಗುವಾಗ ದೇಹ ವಿಪರೀತ ಬಿಸಿಯೆನಿಸುತ್ತಿದ್ದರೆ ಕೊಂಚ ತಣ್ಣೀರು ಬಟ್ಟೆ ಹಾಕಿ

ದೇಹ ತಂಪು ಮಾಡಲ ಕೆಲವು ಹೊತ್ತು ತಣ್ಣಗಿನ ನೀರು ಹಾಕಿದ ಟಬ್ ನಲ್ಲಿ ಕುಳಿತುಕೊಳ್ಳಿ

ಅಲ್ಯೂವೀರಾ ಜೆಲ್ ಅಥವಾ ರಸವನ್ನು ಚರ್ಮಕ್ಕೆ ಹೆಚ್ಚಿಕೊಳ್ಳುವುದರಿಂದ ದೇಹ ತಂಪಾಗುವುದು

ಎಳೆನೀರು ತಂಪು ಗುಣ ಹೊಂದಿದ್ದು ಇದನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ದೇಹ ತಂಪಾಗುವುದು

ಮಕ್ಕಳು ಬಿದ್ದು ಗಾಯ ಮಾಡಿಕೊಂಡರೆ ಮನೆಮದ್ದು

Follow Us on :-