ಸ್ಟೀಲ್ ಪಾತ್ರೆಗೆ ರಸ್ಟ್ ಬರುತ್ತಿದ್ದರೆ ಹೀಗೆ ಮಾಡಿ

ಸ್ಟೀಲ್ ಪಾತ್ರೆಯನ್ನೂ ಸರಿಯಾಗಿ ನಿರ್ವಹಿಸದೇ ಇದ್ದಲ್ಲಿ ಕೆಲವು ಸಮಯ ಉಪಯೋಗಿಸದೇ ಬಿಟ್ಟರೆ ರಸ್ಟ್ ಬರುವ ಸಾಧ್ಯತೆಯಿರುತ್ತದೆ. ಸ್ಟೀಲ್ ಪಾತ್ರೆಗಳು ರಸ್ಟ್ ಹಿಡಿಯದಂತೆ ಏನು ಮಾಡಬೇಕು ಇಲ್ಲಿದೆ ಉಪಾಯ.

Photo Credit: WD

ಸ್ಟೀಲ್ ಪಾತ್ರೆಯನ್ನು ಉಪಯೋಗಿಸಿದ ಬಳಿಕ ಚೆನ್ನಾಗಿ ತೊಳೆದುಕೊಂಡು ನೀರು ಆರಲು ಬಿಡಬೇಕು

ನಿತ್ಯವೂ ಬಳಸದ ಪಾತ್ರೆಗಳಾದರೆ ಬಿಸಿಲಿಗೆ ಅರ್ಧಗಂಟೆ ಇಟ್ಟು ಒಣಗಿಸಿದರೂ ತೊಂದರೆಯಿಲ್ಲ

ಬಳಿಕ ಅವುಗಳನ್ನು ನೀಟಾಗಿ ಶುದ್ಧ ಬಟ್ಟೆಯಿಂದ ಒರೆಸಿಕೊಳ್ಳಬೇಕು

ಸ್ಟೀಲ್ ಪಾತ್ರೆಯ ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ರಸ್ಟ್ ಬರುವ ಸಾಧ್ಯತೆ ಹೆಚ್ಚು

ಉಪ್ಪಿನಂಶವಿರುವ ನೀರಿನಲ್ಲಿ ಸ್ಟೀಲ್ ಪಾತ್ರೆ ತೊಳೆದರೆ ರಸ್ಟ್ ಹಿಡಿಯುವ ಸಾಧ್ಯತೆ ಹೆಚ್ಚು

ಸ್ಟೀಲ್ ಪಾತ್ರೆಗೆ ತುಕ್ಕು ಹಿಡಿದಿದ್ದರೆ ಆ ಜಾಗಕ್ಕೆ ಬೇಕಿಂಗ್ ಸೋಡಾ ಪೇಸ್ಟ್ ಮಾಡಿ ಒರೆಸಿದರೆ ಹೋಗುತ್ತದೆ

ಟೀ ಪೌಡರ್ ನಕಲಿಯೇ ಅಸಲಿಯೇ ತಿಳಿಯಲು ಹೀಗೆ ಮಾಡಿ

Follow Us on :-