ಬಟರ್ ಫ್ರೂಟ್ ಐಸ್ ಕ್ರೀಂ ಈ ರೀತಿ ತಯಾರಿಸಿ

ಇದೀಗ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಸಿಗುವ ಬಟರ್ ಫ್ರೂಟ್ ಐಸ್ ಕ್ರೀಂನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಹೇಗೆ ಎಂದು ಇಲ್ಲಿ ನೋಡಿ.

Photo Credit: Instagram, AI Generated

ಮೊದಲಿಗೆ 1 ಲೀಟರ್ ನಷ್ಟು ಹಾಲು ತೆಗೆದುಕೊಂಡು ಅದನ್ನು ಅಗಲ ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ

ಇದು ಒಂದು ದಪ್ಪ ಹದಕ್ಕೆ ಬರುವಾಗ ಸಕ್ಕರೆ ಹಾಕಿ ಮತ್ತಷ್ಟು ಕುದಿಯಲು ಬಿಡಿ

ಬಳಿಕ ಸ್ವಲ್ಪ ಹಾಲಿನ ಪೌಡರ್, ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

ಈ ಮಿಶ್ರಣಕ್ಕೆ ಕುದಿಯುತ್ತಿರುವ ಹಾಲನ್ನು ಸ್ವಲ್ಪ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿ

ಈ ಪೇಸ್ಟ್ ನ್ನು ಕುದಿಯುತ್ತಿರುವ ಉಳಿದ ಹಾಲಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ ಉರಿ ಆರಿಸಿ

ಈಗ ಸಿಪ್ಪೆ ತೆಗೆದ ಬಟರ್ ಫ್ರೂಟನ್ನು ಹಾಲಿನ ಮಿಶ್ರಣ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಫ್ರೀಜರ್ ನಲ್ಲಿಡಿ.

ಒಂದು ಗಂಟೆ ಬಳಿಕ ಮತ್ತೆ ನುಣ್ಣಗೆ ರುಬ್ಬಿಕೊಂಡು ಮತ್ತೊಮ್ಮೆ ಫ್ರೀಝರ್ ನಲ್ಲಿಟ್ಟರೆ ಐಸ್ ಕ್ರೀಂ ರೆಡಿ

ಬಜ್ಜಿ ಮೆಣಸಿನಕಾಯಿ ಖಾರ ಕಡಿಮೆ ಮಾಡಲು ಟಿಪ್ಸ್

Follow Us on :-