ಮೆಣಸಿನಕಾಯಿ ಬಜ್ಜಿ ಮಾಡುವಾಗ ವಿಪರೀತ ಖಾರವೆನಿಸುತ್ತಿದೆಯೇ? ಕೆಲವರಿಗೆ ಖಾರದ ಗುಣದಿಂದಾಗಿ ಬಜ್ಜಿ ತಿನ್ನಲೂ ಹಿಂಜರಿಕೆಯಿರುತ್ತದೆ. ಆದರೆ ಬಜ್ಜಿ ಮಾಡುವಾಗ ಮೆಣಸಿನಕಾಯಿ ಖಾರ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್.
Photo Credit: Instagram, Facebook
ಮಳೆ ಬರುವಾಗ ಶೈತ್ಯ ಹವೆಯಲ್ಲಿ ನಾಲಿಗೆಗೆ ಚುರ್ ಎನ್ನುವ ಮೆಣಸಿನಕಾಯಿ ಬಜ್ಜಿ ತಿನ್ನಲು ಇಷ್ಟಪಡುತ್ತಾರೆ.
ಮೆಣಸಿನಕಾಯಿ ಬಜ್ಜಿಯ ಖಾರ ಕಡಿಮೆ ಮಾಡಲು ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಬಹುದು
ಮಾರುಕಟ್ಟೆಯಿಂದ ಆದಷ್ಟು ಎಳೆಯ ಮೆಣಸಿನಕಾಯಿಗಳನ್ನು ತೆಗೆದುಕೊಂಡು ಬಂದು ಬಜ್ಜಿ ಮಾಡಿ
ಬಜ್ಜಿ ಮಾಡಲು ಮೊದಲು ಮೆಣಸಿನಕಾಯಿಯನ್ನು ಎರಡಾಗಿ ಸೀಳಿ ಇಟ್ಟುಕೊಳ್ಳಿ
ಈಗ ಇದರಿಂದ ಬೀಜಗಳನ್ನೆಲ್ಲಾ ಒಂದೂ ಬಿಡದೇ ತೆಗೆದುಕೊಂಡು ಪಕ್ಕಕ್ಕಿಡಿ
ಬೀಜ ತೆಗೆದಿಟ್ಟ ಮೆಣಸಿನಕಾಯಿ ಹೋಳಿಗೆ ಉಪ್ಪು ಸವರಿ ಅರ್ಧ ಗಂಟೆ ಬಿಟ್ಟು ಬಜ್ಜಿ ಮಾಡಿ
ತೊಟ್ಟಿನ ಭಾಗವನ್ನು ತೆಗೆದು ಬಜ್ಜಿ ಮಾಡುವುದರಿಂದಲೂ ಖಾರ ಕಡಿಮೆಯಾಗಬಹುದು