ಶ್ಯಾವಿಗೆ ಕುದಿಯುವ ನೀರಿಗೆ ಹಾಕದೇ ಉಪ್ಪಿಟ್ಟು ಮಾಡಿ

ಶ್ಯಾವಿಗೆ ಉಪ್ಪಿಟ್ಟು ಮಾಡುವಾಗ ಮೊದಲು ಬಿಸಿ ನೀರಿನಲ್ಲಿ ನೆನೆ ಹಾಕಿ ಬಳಿಕ ಮಾಡುತ್ತೇವೆ. ಆದರೆ ಬಿಸಿ ನೀರಿನಲ್ಲಿ ನೆನೆ ಹಾಕದೆಯೂ ಶ್ಯಾವಿಗೆ ಉಪ್ಪಿಟ್ಟು ಈ ರೀತಿ ಮಾಡಬಹುದು.

Photo Credit: Instagram

ಶ್ಯಾವಿಗೆ ಉಪ್ಪಿಟ್ಟು ಉದುರಾಗಿರಬೇಕೆಂದರೆ ಈ ಸಲಹೆ ಪಾಲಿಸಿ

ಮೊದಲು ಶ್ಯಾವಿಗೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಿ

ಬಳಿಕ ಇನ್ನೊಂದು ಪಾತ್ರೆಗೆ ತಣ್ಣೀರು ಹಾಕಿ ಎರಡು ಹನಿ ಎಣ್ಣೆ ಹಾಕಿ

ಇದಕ್ಕೆ ತೊಳೆದುಕೊಂಡ ಶ್ಯಾವಿಗೆಯನ್ನು ಸೇರಿಸಿ 10 ನಿಮಿಷ ನೆನೆಯಲು ಬಿಡಿ

ಬಳಿಕ ಬಾಣಲೆಗೆ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ ಒಗ್ಗರಣೆ ಕೊಡಿ

ತರಕಾರಿಗಳನ್ನೂ ಸೇರಿಸಿ ಚೆನ್ನಾಗಿ ಬೇಯಿಸಿ 2 ಲೋಟ ನೀರು ಹಾಕಿ

ಈಗ ಇದಕ್ಕೆ ನೆನೆಸಿಟ್ಟ ಶ್ಯಾವಿಗೆ ಸೇರಿಸಿಕೊಂಡು ಬೇಯಿಸಿದರೆ ಉಪ್ಪಿಟ್ಟು ರೆಡಿ

ರುಚಿಕರ ರೋಸ್ಟ್ ಹೆಸರುಬೇಳೆ ಮಾಡುವುದು ಹೇಗೆ

Follow Us on :-