ಟೊಮೆಟೊ ಕೆಚಪ್ ಮನೆಯಲ್ಲೇ ಮಾಡಿ

ಟೊಮೆಟೊ ಕೆಚಪ್ ಹಾಕಿಕೊಂಡು ಬಜ್ಜಿ, ಚಪಾತಿ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಹಾಗಿದ್ದರೆ ಆರೋಗ್ಯಕರವಾಗಿ ಮನೆಯಲ್ಲಿಯೇ ಟೊಮೆಟೊ ಕೆಚಪ್ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಟೊಮೆಟೊವನ್ನು ಅರ್ಧ ಕಟ್ ಮಾಡಿ ಮೃದುವಾಗಿ ಬೇಯಿಸಿ

ಈಗ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಇದನ್ನು ಸೋಸಿಕೊಂಡು ಒಂದು ಬಾಣಲೆಗೆ ಹಾಕಿ

ಇದನ್ನು ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಕುದಿಸಿ

ಕುದಿಯುತ್ತಿರುವಾಗ ಸ್ವಲ್ಪ ಸಕ್ಕರೆ, ವಿನೇಗರ್ ಸೇರಿಸಿಕೊಳ್ಳಿ

ಇದು ಕುದಿದು ಇಡ್ಲಿ ಹಿಟ್ಟಿನಂತಾದಾಗ ಉರಿ ಆಫ್ ಮಾಡಿ

ಈಗ ಸಿಂಪಲ್ ಆಗಿರುವ ಟೊಮೆಟೊ ಕೆಚಪ್ ರೆಡಿಯಾಗಿರುತ್ತದೆ

ಮಕ್ಕಳಿಗೂ ಇಷ್ಟವಾಗುತ್ತದೆ ಬ್ರೆಡ್ ಪಿಜ್ಜಾ

Follow Us on :-