ಮಸಾಲೆ ದೋಸೆಗೆ ಹಾಕುವ ಕೆಂಪು ಚಟ್ನಿ ಮಾಡುವ ವಿಧಾನ

ಮಸಾಲೆ ದೋಸೆ ಮಾಢುವಾಗ ಹೋಟೆಲ್ ಗಳಲ್ಲಿ ಅದರ ಮೇಲೆ ಕೆಂಪು ಬಣ್ಣದ ಖಾರ ಚಟ್ನಿ ಹಾಕಿಕೊಡುತ್ತಾರೆ. ಈ ಖಾರ ಚಟ್ನಿ ಮಾಡುವುದು ಹೇಗ ಎಂದು ಇಲ್ಲಿದೆ ವಿಧಾನ.

Photo Credit: Instagram

ಮೊದಲಿಗೆ ಐದರಿಂದ ಆರು ಕೆಂಪು ಮೆಣಸಿನಕಾಯಿಯನ್ನು ನೀರಿನಲ್ಲಿ ನೆನೆ ಹಾಕಿ

ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಜೀರಿಗೆ ಧನಿಯಾ ಸೇರಿಸಿ

ಈಗ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ರುಚಿಗೆ ತಕ್ಕ ಉಪ್ಪನ್ನೂ ಸೇರಿಸಿಕೊಳ್ಳಿ

ಬಾಣಲೆಯಲ್ಲಿ ಸ್ವಲ್ಪ ಕಡಲಬೇಳೆಯನ್ನು ಎಣ್ಣೆ ಹಾಕದೇ ಫ್ರೈ ಮಾಡಿ ಸೇರಿಸಿಕೊಳ್ಳಿ

ಇವೆಲ್ಲವನ್ನೂ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಈ ಚಟ್ನಿಯನ್ನು ದೋಸೆ ಹುಯ್ದು ಎಬ್ಬಿಸುವ ಮೊದಲು ಮೇಲಿನಿಂದ ಸವರಿಕೊಳ್ಳಿ

ಚಟ್ನಿ ಚೆನ್ನಾಗಿ ಹಿಡಿದುಕೊಳ್ಳಲು ಮೇಲಿನಿಂದ ತುಪ್ಪ ಹಾಕಿಕೊಂಡು ದೋಸೆ ಸವಿಯಬಹುದು

ಬನಿಯನ್ ತೊಳೆದರೂ ವಾಸನೆ ಬರುತ್ತಿದೆಯೇ ಹೀಗೆ ಮಾಡಿ

Follow Us on :-