ಮನೆಯಲ್ಲೇ ರಸ್ಮಲೈ ಮಾಡಬೇಕಾ, ಸಿಂಪಲ್ ವಿಧಾನ ಇಲ್ಲಿದೆ

ರಸ್ಮಲೈ ಸ್ವೀಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದನ್ನು ರೆಸ್ಟೋರೆಂಟ್ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ಸೇವಿಸಬಹುದು. ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಮೊದಲಿಗೆ ಒಂದು ಲೀಟರ್ ಹಾಲನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ.

ಹಾಲು ಕುದಿಯುವಾಗ ಇದಕ್ಕೆ ಎರಡು ಸ್ಪೂನ್ ವಿನೇಗರ್ ಹಾಕಿ ಮೊಸರು ಮೊಸರಿನಂತೆ ಮಾಡಿಕೊಳ್ಳಿ

ಇದನ್ನು ಕೆಳಗಿಳಿಸಿ ಒಂದು ಬಟ್ಟೆಗೆ ಹುಯ್ದುಕೊಂಡು ಚೆನ್ನಾಗಿ ಹಿಂಡಿಕೊಳ್ಳಿ

ಈಗ ಹಿಂಡಿ ಹಿಟ್ಟಿನ ರೀತಿ ಸಿಕ್ಕ ಹಾಲಿನ ಪೇಸ್ಟ್ ನ್ನು ಕೈಗೆ ತುಪ್ಪ ಸವರಿಕೊಂಡು ಚಪ್ಪಟೆ ಉಂಡೆ ಕಟ್ಟಿ

ಈಗ ಇನ್ನೊಂದು ಪಾತ್ರೆಗೆ ಹಾಲು ಮತ್ತು ಸಕ್ಕರೆ, ಕೇಸರಿ, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಕುದಿಸಿ

ಹಾಲು ಸ್ವಲ್ಪ ದಪ್ಪವಾಗುವಷ್ಟು ಕುದಿಸಿದ ಬಳಿಕ ಅದಕ್ಕೆ ಗೋಡಂಬಿ ಹೆಚ್ಚಿ ಸೇರಿಸಿಕೊಳ್ಳಿ

ಹಾಲು ಮಂದವಾಗುವಷ್ಟು ಕುದಿಸಿದ ಬಳಿಕ ಕೆಳಗಿಳಿಸಿ ಕೊಂಚ ತಣ್ಣಗಾಗಲು ಬಿಡಿ

ಈಗ ಹಾಲಿನ ಚಪ್ಪಟೆ ಉಂಡೆಯನ್ನು ಹಾಲು, ಸಕ್ಕರೆ ಪಾಕಕ್ಕೆ ಸೇರಿಸಿ ಕೂಲ್ ಮಾಡಿದರೆ ರಸ್ಮಲೈ ಸಿದ್ಧ

ವಾಷಿಂಗ್ ಮೆಷಿನ್ ನನ್ನೇ ತೊಳೆಯಬೇಕಾ ಇಲ್ಲಿದೆ ಟಿಪ್ಸ್

Follow Us on :-