ರಾಜಸ್ಥಾನಿ ಶೈಲಿಯಲ್ಲಿ ಬೆಳ್ಳುಳ್ಳಿ ಚಟ್ನಿ ಎಂದರೆ ಅದಕ್ಕೆ ಅದರದ್ದೇ ಆದ ವಿಶೇಷ ರುಚಿಯಿದೆ. ರಾಜಸ್ಥಾನಿ ಶೈಲಿಯಲ್ಲಿ ಮಾಡುವ ಬೆಳ್ಳುಳ್ಳಿ ಅನ್ನ, ಚಪಾತಿ ಜೊತೆಗೂ ಕಲಸಿಕೊಂಡು ತಿನ್ನಬಹುದು. ಮಾಡುವ ವಿಧಾನ ಇಲ್ಲಿದೆ.
Photo Credit: Instagram
ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ 5-6 ಒಣ ಮೆಣಸು ಹುರಿದುಕೊಳ್ಳಿ
ಬಳಿಕ ಇದೇ ಬಾಣಲೆಗೆ ಸ್ವಲ್ಪ ಬೆಳ್ಳುಳ್ಳಿ ಹಾಕಿ ಬಣ್ಣ ಮಾಸುವವರೆಗೆ ಫ್ರೈ ಮಾಡಿ
ಇದನ್ನು ಫ್ರೈ ಮಾಡುತ್ತಿರುವಾಗಲೇ ಸ್ವಲ್ಪ ಹೆಚ್ಚಿದ ಶುಂಠಿಯನ್ನೂ ಸೇರಿಸಿ ಫ್ರೈ ಮಾಡಿ
ಈಗ ಎಲ್ಲವೂ ಕೂಲ್ ಆದ ಬಳಿಕ ಫ್ರೈ ಮಾಡಿಕೊಂಡ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ
ಇದಕ್ಕೆ ಸ್ವಲ್ಪ ಇಂಗು, ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
ಇದು ಖಾರವೆನಿಸುತ್ತಿದ್ದರೆ ಸ್ವಲ್ಪ ಎಣ್ಣೆ ಸೇರಿಸಿ ಪಾಕ ಹದ ಮಾಡಿಕೊಳ್ಳಿ
ಈ ಚಟ್ನಿಯನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿಟ್ಟರೆ ಒಂದು ವಾರ ಉಪಯೋಗಿಸಬಹುದು