ನೆಲಗಡಲೆಯನ್ನು ಸೇವಿಸುವಾಗ ಅದರ ಸಿಪ್ಪೆಯನ್ನು ಬಿಸಾಕಿ ಬಿಡುತ್ತೇವೆ. ಆದರೆ ಅದರ ಸಿಪ್ಪೆಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಅವುಗಳು ಗಿಡಗಳ ಪೋಷಣೆಗೆ ಅತ್ಯುತ್ತಮವಾದುದು. ಇದರಿಂದ ಮನೆಯಲ್ಲಿಯೇ ಗೊಬ್ಬರ ತಯಾರಿಸುವುದು ಹೇಗೆ ನೋಡಿ.
Photo Credit: Instagram
ನೆಲಗಡಲೆಯ ಸಿಪ್ಪೆಯನ್ನು ಮೊದಲು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ
ಇಲ್ಲವೇ ಹಾಗೆಯೇ ಸಿಪ್ಪೆಯನ್ನು ನೀರಿನಲ್ಲಿ ನೆನೆ ಹಾಕಿಟ್ಟುಕೊಳ್ಳಿ
ಸುಮಾರು 12 ಗಂಟೆಗಳ ನೀರಿನಲ್ಲಿ ನೆನೆ ಹಾಕಿದಾಗ ಸಿಪ್ಪೆ ಚೆನ್ನಾಗಿ ಮೃದುವಾಗುತ್ತದೆ
ಪಾತ್ರೆಯಲ್ಲಿ ಸ್ವಲ್ಪ ಒಣಗಿದ ಎಲೆ, ತರಕಾರಿ ಸಿಪ್ಪೆಗಳು, ಮಣ್ಣಿನ ಜೊತೆ ಇದನ್ನೂ ಮಿಕ್ಸ್ ಮಾಡಿ
ಸುಮಾರು 15 ದಿನ ಹೀಗೇ ಕೊಳೆಯಲು ಬಿಟ್ಟರೆ ಇದು ಉತ್ತಮ ಗೊಬ್ಬರವಾಗುತ್ತದೆ
ನೆಲಗಡಲೆಯ ಸಿಪ್ಪೆಯಿಂದ ನೈಟ್ರೋಜನ್ ಅಂಶ ಬಿಡುಗಡೆಯಾಗಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ
ಬೇರುಗಳು ಚೆನ್ನಾಗಿ ನೀರಿನಂಶ ಹಿಡಿದಿಟ್ಟುಕೊಳ್ಳಲು ಈ ಗೊಬ್ಬರ ಸಹಾಯ ಮಾಡುತ್ತದೆ