ಚಪಾತಿಗೆ ಹಿಟ್ಟು ಕಲೆಸುವಾಗ ಅದು ಅಂಟು ಅಂಟಾಗಿ ಚೆನ್ನಾಗಿ ಹಿಟ್ಟು ಹದಕ್ಕೆ ಬರುವುದಿಲ್ಲ ಎಂಬ ಸಮಸ್ಯೆಯಿದ್ದರೆ ಈಗ ಹೇಳುವ ಕೆಲವು ಟಿಪ್ಸ್ ಗಳನ್ನು ಪಾಲಿಸಿದರೆ ಸಮಸ್ಯೆ ಸರಿ ಹೋಗುತ್ತದೆ ಮತ್ತು ಚಪಾತಿ ಹಿಟ್ಟು ಮೃದುವಾಗುತ್ತದೆ.
Photo Credit: Instagram
ಚಪಾತಿ ಮಾಡುವಾಗ ಹಿಟ್ಟು ಹದವಾಗಿ ನಾದಿಕೊಂಡರೆ ಮಾತ್ರ ಚಪಾತಿ ಚೆನ್ನಾಗಿ ಬರುತ್ತದೆ
ಚಪಾತಿ ಕಲೆಸುವಾಗ ಕೆಲವೊಮ್ಮೆ ಹಿಟ್ಟು ಅಂಟು ಅಂಟಾಗಿ ಹದಕ್ಕೆ ಬರದೇ ಸಮಸ್ಯೆಯಾಗುತ್ತದೆ
ಮೊದಲು ಒಂದು ಬಾಲ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸವರಿಕೊಂಡು ಇಡಿ
ಈಗ ಇದಕ್ಕೆ ಎರಡು ಕಪ್ ನಷ್ಟು ಗೋದಿ ಹಿಟ್ಟು ಹಾಕಿ ಮಧ್ಯಭಾಗದಲ್ಲಿ ಗುಂಡಿ ಮಾಡಿ
ಈ ಹಿಟ್ಟಿಗೆ ಮುಕ್ಕಾಲು ಕಪ್ ನಷ್ಟು ಹದ ಬಿಸಿ ಹಾಲನ್ನು ಹಾಕಿಕೊಳ್ಳಿ
ಈಗ ಮಧ್ಯಭಾಗದಿಂದ ವೃತ್ತಾಕಾರದಲ್ಲಿ ಕೈಯಾಡಿಸುತ್ತಾ ಹಿಟ್ಟು ಕಲಸಿಕೊಳ್ಳಿ
ಬೌಲ್ ಗೆ ತುಪ್ಪಹಾಕಿರುವುದರಿಂದ ಹೆಚ್ಚು ಅಂಟಿಕೊಳ್ಳದೇ ಸುಲಭವಾಗಿ ಹಿಟ್ಟು ರೆಡಿಯಾಗುತ್ತದೆ