ಸುಲಭವಾಗಿ ನಿಪ್ಪಟ್ಟು ಮಾಡುವುದು ಹೇಗೆ

ಸಂಜೆ ತಿಂಡಿಗೆ ಕುರುಕಲು ಏನಾದರೂ ಬೇಕೆನಿಸಿದರೆ ದಿಡೀರ್ ಆಗಿ ನಿಪ್ಪಟ್ಟು ಮಾಡಬಹುದು. ಸುಲಭವಾಗಿ ನಿಪ್ಪಟ್ಟು ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಒಂದು ಬೌಲ್ ಗೆ ಅಕ್ಕಿಹಿಟ್ಟು, ಹುರಿಗಡಲೆ ಪೌಡರ್ ಹಾಕಿ

ಈಗ ಇದಕ್ಕೆ ಸ್ವಲ್ಪ ಚಿಲ್ಲಿ ಫ್ಲೆಕ್ಸ್, ಕರಿಬೇವು ಉಪ್ಪು ಸೇರಿಸಿ

ಬಳಿಕ ಕಪ್ಪು ಎಳ್ಳು, ಎರಡು ಸ್ಪೂನ್ ಬಿಸಿ ಎಣ್ಣೆ, ಖಾರದಪುಡಿ, ಅರಿಶಿನ ಸೇರಿಸಿ

ಬಳಿಕ ಪೀಸ್ ಮಾಡಿದ ನೆಲಗಡಲೆ, ನೆನೆಸಿದ ಕಡಲೆ ಬೇಳೆ ಸೇರಿಸಿ

ಈಗ ಇದಕ್ಕೆ ಸ್ವಲ್ಪವೇ ನೀರು ಹಾಕಿ ಕಲಸಿಕೊಳ್ಳಿ

ಬಳಿಕ ಪ್ಲಾಸ್ಟಿಕ್ ಶೀಟ್ ನಲ್ಲಿ ಉಂಡೆ ತಟ್ಟಿ ವಡೆ ಮಾಡಿಕೊಳ್ಳಿ

ಈಗ ಕಾದ ಎಣ್ಣೆಗೆ ಇದನ್ನು ಹಾಕಿ ಫ್ರೈ ಮಾಡಿದರೆ ನಿಪ್ಪಟ್ಟು ರೆಡಿ

ಮೈದಾ, ಸಕ್ಕರೆ, ಓವನ್ ಬಳಸದೇ ಮಾಡುವ ಕಪ್ ಕೇಕ್

Follow Us on :-