ಮೈದಾ, ಸಕ್ಕರೆ, ಓವನ್ ಬಳಸದೇ ಮಾಡುವ ಕಪ್ ಕೇಕ್

ಸಾಮಾನ್ಯವಾಗಿ ಕೇಕ್ ಎಂದರೆ ಮೈದಾ ಹಿಟ್ಟು, ಸಕ್ಕರೆ ಬೇಕೇ ಬೇಕು. ಆದರೆ ಇದು ಆರೋಗ್ಯಕರವಲ್ಲ ಎನಿಸಿದರೆ ಮೈದಾ, ಸಕ್ಕರೆ, ಓವನ್ ಬಳಸದೇ ಕೇಕ್ ತಯಾರಿಸಬುದು. ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಮುಕ್ಕಾಲು ಕಪ್ ಹಾಲು, ಅಷ್ಟೇ ಬೆಲ್ಲ, ವೆನಿಲ್ಲಾ ಎಸೆನ್ಸ್ ಹಾಕಿ ಕಲಸಿ

ಇದಕ್ಕೆ ನಾಲ್ಕೈದು ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಕಲಸಿ

ಬಳಿಕ ಒಂದು ಕಪ್ ಗೋಧಿ ಹಿಟ್ಟು, ಕೋಕ ಪೌಡರ್, ಬೇಕಿಂಗ್ ಸೋಡಾ ಹಾಕಿ

ಇದನ್ನು ಚೆನ್ನಾಗಿ ಬೀಟ್ ಮಾಡಿಕೊಂಡು ಹಿಟ್ಟು ತಯಾರಿಸಿಕೊಳ್ಳಿ

ಕಲಸಿದಾಗ ಯಾವುದೇ ಗಂಟುಗಳಿಲ್ಲದಂತೆ ನೋಡಿಕೊಳ್ಳಿ

ಈಗ ಒಂದು ತವಾ ಮೇಲೆ ಪಡ್ಡು ಪಾತ್ರೆ ಇಟ್ಟು ಬಿಸಿ ಮಾಡಿ

ಬಳಿಕ ಅದಕ್ಕೆ ಕೇಕ್ ಹಿಟ್ಟನ್ನು ಹಾಕಿ ಮುಚ್ಚಿ ಬೇಯಿಸಿ

ತೆಂಗಿನಕಾಯಿ ಬಳಸದೇ ಮಾಡುವ ಚಟ್ನಿ ರೆಸಿಪಿ

Follow Us on :-