ಮಸಾಲೆ ಇಡ್ಲಿ ಮಾಡುವ ವಿಧಾನ

ಒಂದೇ ರೀತಿಯ ಇಡ್ಲಿ ತಿಂದು ಬೋರಾಗಿದ್ದರೆ ಮಸಾಲೆ ಇಡ್ಲಿ ಮಾಡಿನೋಡಿ. ವೆರೈಟಿ ಜೊತೆಗೆ ಬಾಯಿಗೂ ಡಿಫರೆಂಟ್ ರುಚಿಕೊಡುವ ಮಸಾಲೆ ಇಡ್ಲಿಯನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

Photo Credit: Instagram, AI image

ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಸುಮಾರು 4-5 ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ

ಬಳಿಕ ಇದನ್ನು ಪ್ರತ್ಯೇಕವಾಗಿ ನೀರು ಸೇರಿಸಿಕೊಂಡು ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ

ಒಂದು ಪಾತ್ರೆಗೆ ಹಾಕಿಕೊಂಡು ಒಂದು ರಾತ್ರಿ ಇಡೀ ಈ ಹಿಟ್ಟನ್ನು ಮುಚ್ಚಿ ಹುಳಿ ಬರಿಸಲು ಇಡಿ

ಈಗ ಕ್ಯಾರೆಟ್ ತುರಿದು ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಿ

ಇದಕ್ಕೆ ಜೀರಿಗೆ, ಹಸಿಮೆಣಸಿನಕಾಯಿ, ಕರಿಬೇವು ಜೊತೆಗೆ ಉಪ್ಪು ಸೇರಿಸಿ ಹಿಟ್ಟಿಗೆ ಹಾಕಿ ಕಲಸಿಕೊಳ್ಳಿ

ಈಗ ಇಡ್ಲಿ ಪಾತ್ರೆಗೆ ಎಣ್ಣೆ ಹಚ್ಚಿಕೊಂಡು ಅಥವಾ ಒದ್ದೆ ಬಟ್ಟೆ ಇಟ್ಟು ಈ ಹಿಟ್ಟನ್ನು ಎರೆದುಕೊಳ್ಳಿ

ಮಧ್ಯಮ ಉರಿಯಲ್ಲಿ ಇಡ್ಲಿಯನ್ನು ಸುಮಾರು 20 ನಿಮಿಷ ಕಾಲ ಬೇಯಿಸಿದರೆ ಮಸಾಲೆ ಇಡ್ಲಿ ರೆಡಿ

ಫ್ರಿಡ್ಜ್ ಫ್ರೀಝರ್ ನ ಐಸ್ ಕರಗಿಸುವುದು ಹೇಗೆ

Follow Us on :-