ಕೇರಳ ಸ್ಟೈಲ್ ಕಡಲೆ ಕರಿ ಮಾಡುವ ವಿಧಾನ

ಕೇರಳದಲ್ಲಿ ಪುಟ್ಟು ಜೊತೆಗೆ ಸೈಡ್ ಡಿಶ್ ಆಗಿ ನೀಡುವ ಕಡಲ ಕರಿ ತುಂಬಾ ಫೇಮಸ್. ಈ ಕರಿ ಮಾಡುವುದು ಹೇಗೆ ಎಂದು ಇಲ್ಲಿದೆ ಸುಲಭವಾದ ವಿಧಾನ. ಮಾಡಿ ನೋಡಿ.

Photo Credit: Instagram

ಮೊದಲಿಗೆ ಕೆಂಪು ಕಡಲೆಯನ್ನು 7-9 ಗಂಟೆ ಕಾಲ ನೆನೆಸಿ ನೀರು ಬಸಿದಿಡಿ

ಕುಕ್ಕರ್ ಗೆ ನೆನೆಸಿಟ್ಟ ಕಡಲೆ, ಕತ್ತರಿಸಿದ ಟೊಮೆಟೊ, ಈರುಳ್ಳಿ, ಹಸಿಮೆಣಸು, ಸ್ವಲ್ಪ ಉಪ್ಪು ಬೇಯಿಸಿ ಇದಕ್ಕೆ ಸೇರಿಸಿ

ಈಗ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ

ಎಣ್ಣೆ ಬಿಸಿಯಾದ ಮೇಲೆ ಜೀರಿಗೆ, ಸಾಸಿವೆ, ಒಣಮೆಣಸು, ಕರಿಬೇವಿನ ಒಗ್ಗರಣೆ ಕೊಡಿ

ಬಳಿಕ ಇದಕ್ಕೆ ಗರಂ ಮಸಾಲೆ, ಧನಿಯಾ ಪುಡಿ, ಅರಿಶಿನ, ಖಾರದ ಪುಡಿ ಹಾಕಿ ಪ್ರೈ ಮಾಡಿಕೊಳ್ಳಿ

ಈಗ ಇದಕ್ಕೆ ಬೇಯಿಸಿದ ಕಡಲೆ, ತರಕಾರಿ ಹಾಕಿ, ರುಚಿಗೆ ತಕ್ಕ ಉಪ್ಪು, ಬೇಕದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ

ಕುದಿ ಬಂದ ಮೇಲೆ ಮೆಲಿನಿಂದ ಕಾಳುಮೆಣಸಿನ ಪುಡಿ ಉದುರಿಸಿದರೆ ಕಡಲೆ ಕರಿ ಸವಿಯಲು ಸಿದ್ಧ

ಚಪಾತಿ ಹಿಟ್ಟು ಅಂಟು ಅಂಟಾಗದಂತೆ ಈ ಟಿಪ್ಸ್ ಪಾಲಿಸಿ

Follow Us on :-