ದಿಡೀರ್ ಆಗಿ ಮಾಡಬಹುದಾದ ಕ್ರಿಸ್ಪಿ ದೋಸೆ

ದೋಸೆ ಮಾಡಲು ಅಕ್ಕಿ ನೆನೆ ಹಾಕಲು ಮರೆತು ಹೋಯಿತೆಂದರೆ ಚಿಂತೆ ಬೇಡ. ದಿಡೀರ್ ಆಗಿ ಮಸಾಲೆ ದೋಸೆಯನ್ನೂ ಮೀರಿಸುವಂತೆ ಕ್ರಿಸ್ಪಿಯಾಗಿ ಮಾಡಬಹುದಾದ ದೋಸೆ ರೆಸಿಪಿ ಇಲ್ಲಿದೆ.

Photo Credit: Instagram

ಮೊದಲು ಎರಡು ಕಪ್ ರವೆಯನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ರುಬ್ಬಿ ಪುಡಿ ಮಾಡಿಕೊಳ್ಳಿ

ಇದಕ್ಕೆ ಒಂದು ಕಪ್ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ

ಬಳಿಕ ಇನ್ನೊಂದು ಕಪ್ ಅಕ್ಕಿ ಹಿಟ್ಟನ್ನೂ ಸೇರಿಸಿ ನೀರು ಹಾಕದೇ ಚೆನ್ನಾಗಿ ಮಿಕ್ಸ್ ಮಾಡಿ

ಈಗ ಇದಕ್ಕೆ ಅರ್ಧ ಕಪ್ ಮೊಸರು, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ

ಇದಕ್ಕೆ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ನೀರು ಹಾಕಿಕೊಂಡು 10 ನಿಮಿಷ ಬಿಡಿ

ಬಳಿಕ ಕಾದ ಕಾವಲಿ ಮೇಲೆ ಕೊಂಚ ಎಣ್ಣೆ ಸವರಿಕೊಂಡು ದೋಸೆ ಹುಯ್ದುಕೊಳ್ಳಿ

ಇದನ್ನು ಮಧ್ಯಮ ಉರಿಯಲ್ಲಿ ಗರಿ ಗರಿಯಾಗಿ ಬೇಯಿಸಿಕೊಂಡರೆ ದಿಡೀರ್ ದೋಸೆ ರೆಡಿ

ಬಾಗಿಲುಗಳು ಶಬ್ಧ ಮಾಡುತ್ತಿದ್ದರೆ ಈ ರೀತಿ ಮಾಡಿ

Follow Us on :-