ಹೋಟೆಲ್ ನಲ್ಲಿ ಸೆಟ್ ದೋಸೆ ಎಷ್ಟು ಮೃದುವಾಗಿ ರುಚಿಯಾಗಿರುತ್ತೆ ಎಂದು ನೀವು ಅಂದುಕೊಳ್ಳಬಹುದು. ಹಾಗಿದ್ದರೆ ಮನೆಯಲ್ಲಿಯೂ ಹೋಟೆಲ್ ಶೈಲಿಯಲ್ಲಿ ಸೆಟ್ ದೋಸೆ ಮಾಡಿಕೊಳ್ಳುವುದು ಹೇಗೆ ಇಲ್ಲಿ ನೋಡಿ.
Photo Credit: Facebook, AI image
ದೋಸೆ ಅಕ್ಕಿ 1 ಕಪ್, ಇಡ್ಲಿ ಕಪ್ ಅರ್ಧ ಕಪ್, ಕುಚ್ಚಿಲಕ್ಕಿ ಕಾಲು ಕಪ್, ಉದ್ದಿನ ಬೇಳೆ ಅರ್ಧಕಪ್ ನೆನೆ ಹಾಕಿ
ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಮೆಂತೆ, ಕಡಲೆ ಬೇಳೆ, ಕಾಲು ಕಪ್ ನಷ್ಟು ಸಬ್ಬಕ್ಕಿ ನೆನೆ ಹಾಕಿ
ಇವಿಷ್ಟನ್ನೂ ನಾಲ್ಕೈದು ಗಂಟೆ ನೆನೆ ಹಾಕಿದ ಬಳಿಕ ಎಲ್ಲದರ ಜೊತೆಗೆ ಕಾಲು ಕಪ್ ಅವಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ
ಈ ಹಿಟ್ಟನ್ನು ಮಾಮೂಲಿ ಉದ್ದಿನ ದೋಸೆ ಹಿಟ್ಟಿನಂತೆ ಮೇಲಿನಿಂದ ಉಪ್ಪು ಹಾಕಿ ಹುಳಿಬರಲು ಇಡಿ
ಹುಳಿ ಬಂದ ನಂತರ ಇದಕ್ಕೆ ಕಾಲು ಕಪ್ ನಷ್ಟು ಗೋದಿಹಿಟ್ಟು, ರವೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ