ದಾಸವಾಳ ಗಿಡದಲ್ಲಿ ಹೆಚ್ಚು ಹೂ ಬಿಡಲು ಟಿಪ್ಸ್

ಮನೆಯಲ್ಲಿ ನೆಲದ ಮೇಲೆ ಅಥವಾ ಪಾಟ್ ನಲ್ಲಿ ದಾಸವಾಳದ ಗಿಡ ನೆಡಬಹುದು. ಆದರೆ ದಾಸವಾಳ ಗಿಡದಲ್ಲಿಅದು ಹೆಚ್ಚು ಹೂ ಬಿಡಬೇಕೆಂದರೆ ಏನು ಮಾಡಬೇಕು ಎಂದು ನಿಮಗೆ ಸುಲಭವಾದ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.

Photo Credit: Instagram, Facebook

ದಾಸವಾಳ ಗಿಡವನ್ನು ಪಾಟ್ ಬಿಟ್ಟು ನೆಲದ ಮೇಲೆಯೇ ಮಣ್ಣಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುತ್ತದೆ

ಪಾಟ್ ನಲ್ಲಿ ನೆಡುವುದಾದರೆ ಸುಮಾರು 14 ಇಂಚಿನ ಪಾಟ್ ನಲ್ಲಿ ಗಿಡ ಮಾಡಿಕೊಳ್ಳಿ

ಎರಡರಿಂದ ಮೂರು ಚಮಚ ಕಾಫಿ ಪೌಡರ್ ನ್ನು ಒಂದು ಲೋಟ ನೀರಿಗೆ ಹಾಕಿ ಗಿಡಕ್ಕೆ ಹಾಕಿ

ದಾಸವಾಳದ ಕಾಂಡಗಳನ್ನು ಆಗಾಗ ಕತ್ತರಿಸುವುದರಿಂದ ಚಿಗುರಿ ಬಂದು ಹೂ ಬಿಡುತ್ತದೆ

ದಾಸವಾಳದ ಗಿಡಕ್ಕೆ ಸೆಗಣಿ ನೀರು ಹಾಕಿದರೆ ಹೆಚ್ಚು ಹೂಗಳು ಬಿಡುತ್ತವೆ

ದಾಸವಾಳದ ಗಿಡಕ್ಕೆ ಕಹಿಬೇವಿನ ಎಲೆಯ ಕಷಾಯ ಹಾಕುತ್ತಿದ್ದರೆ ಹುಳ ನಾಶವಾಗಿ ಹೂ ಬಿಡುತ್ತದೆ

ಒಣಗಿದ ಎಲೆಗಳು, ಚಹಾ ಮಾಡಿ ಉಳಿದ ಪೌಡರ್ ಹಾಕಿದರೆ ಚೆನ್ನಾಗಿ ಹೂ ಬಿಡುತ್ತದೆ

ಕರಿಬೇವು ಪಾಟ್ ನಲ್ಲಿ ಬೆಳೆಸಲು ಏನು ಮಾಡಬೇಕು

Follow Us on :-