ಆರೋಗ್ಯಕರ ನುಗ್ಗೆಕಾಯಿ ಸೂಪ್ ಹೀಗೆ ಮಾಡಿ

ದೇಹದ ಆರೋಗ್ಯಕ್ಕೆ ನುಗ್ಗೆಕಾಯಿಯಿಂದ ಹಲವು ಪ್ರಯೋಜನಗಳಿವೆ. ನುಗ್ಗೆ ಕಾಯಿ ಬಳಸಿ ಸೂಪ್ ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಮೊದಲು ನುಗ್ಗೆಕಾಯಿ ತುಂಡು ಮಾಡಿ ನೀರಿಗೆ ಹಾಕಿ ಕುದಿಸಿ

ಹೋಳು ಬೆಂದ ಬಳಿಕ ನೀರಿನಿಂದ ತೆಗೆದು ತಟ್ಟೆಗೆ ಹಾಕಿಕೊಳ್ಳಿ

ಈಗ ಇದರ ಒಳ ತಿರುಳನ್ನು ತೆಗೆದುಕೊಳ್ಳಿ

ಈ ತಿರುಳಿನ ಅಂಶವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಒಂದು ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ ರುಬ್ಬಿದ ನುಗ್ಗೆಯನ್ನು ಸೇರಿಸಿ

ಇದನ್ನು ಚೆನ್ನಾಗಿ ಕುದಿಸಿ ರುಚಿಗೆ ತಕ್ಕ ಉಪ್ಪು ಸೇರಿಸಿ

ಕೊನೆಯಲ್ಲಿ ಸ್ವಲ್ಪ ಕಾಳು ಮೆಣಸು ಪುಡಿ ಹಾಕಿಕೊಂಡು ಇಳಿಸಿದರೆ ಸೂಪ್ ರೆಡಿ

ಬ್ರೆಡ್ ಉಪ್ಪಿಟ್ಟು ಕೇಳಿದ್ದೀರಾ, ಮಾಡುವುದು ಹೇಗೆ ನೋಡಿ

Follow Us on :-