ಕಹಿಯೇ ಇಲ್ಲದ ಹಾಗಲಕಾಯಿ ಗೊಜ್ಜು ರೆಸಿಪಿ

ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದಾದರೂ ಕಹಿ ರುಚಿ ಎನ್ನುವ ಕಾರಣಕ್ಕೆ ಕೆಲವರು ದೂರವಿಡುತ್ತಾರೆ. ಕಹಿಯೇ ಇಲ್ಲದಂತೆ ಹಾಗಲಕಾಯಿ ಗೊಜ್ಜು ವಿಧಾನ ಇಲ್ಲಿದೆ.

Photo Credit: Instagram

ಮೊದಲು ಹಾಗಲಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು ಹಾಕಿ

ಈಗ ಇದಕ್ಕೆ ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಹಿಂಡಿಕೊಳ್ಳಿ

ಮಿಕ್ಸಿಗೆ ಕಾಯಿ ತುರಿ, ಹುರಿದ ಎಳ್ಳು ಹಾಕಿ

ಇದಕ್ಕೆ ಹುರಿಯದ ಉದ್ದಿನ ಬೇಳೆ, ಕಡಲೆಬೇಳೆ, ಧನಿಯಾ, ಕೆಂಪು ಮೆಣಸು ಸೇರಿಸಿ

ಇದನ್ನು ನೀರು, ಹುಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಬಾಣಲೆಗೆ ಒಗ್ಗರಣೆ ಮಾಡಿ ಹಾಗಲಕಾಯಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿ

ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ಕುದಿಸಿದರೆ ಗೊಜ್ಜು ರೆಡಿ

ಶ್ರವಣ ನಕ್ಷತ್ರದಿಂದ ರೇವತಿ ನಕ್ಷತ್ರದ ಮಗುವಿಗೆ ಹೆಸರಿಡಲು ಟಿಪ್ಸ್

Follow Us on :-